ಬೆಂಗಳೂರು, ಅ 24 (DaijiworldNews/MS): ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಲಂಚ, ಭ್ರಷ್ಟಾಚಾರದ ಟೀಕೆಯ ರೀತಿಯ ಹೇಳಿಕೆಗಳನ್ನು ಕೆಪಿಸಿಸಿ ಕಚೇರಿಯಲ್ಲಿ ಅವರದ್ದೇ ಪಕ್ಷದ ಇಬ್ಬರು ನಾಯಕರಾದ ಸಲೀಂ ಹಾಗೂ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ನಡುವೆ ಗುಸುಪಿಸು ಮಾತು ವೈರಲ್ ವಿಚಾರವಾಗಿ ಉಗ್ರಪ್ಪ ವಿರುದ್ದ ಯಾವುದೇ ಕ್ರಮ ಕೈಗೊಳ್ಳದ ಕಾಂಗ್ರೆಸ್ ವಿರುದ್ದ ಬಿಜೆಪಿ ವ್ಯಂಗ್ಯವಾಡಿದೆ.
ಉಗ್ರಪ್ಪ ವಿರುದ್ದ ಯಾವುದೇ ಕ್ರಮ ಕೈಗೊಳ್ಳದ ನೊಟೀಸ್ ನೀಡಿ, ಉಗ್ರಪ್ಪ ಸಲೀಂ ಅವರ ಮಾತಿಗೆ ನಕ್ಕಿದ್ದಾರೆ ಅಷ್ಟೇ, ಅದೇನೂ ತಪ್ಪಿಲ್ಲ ಎಂದು ರಾಜ್ಯ ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಹೇಳಿಕೆ ನೀಡಿರುವ ಪತ್ರಿಕಾ ವರದಿಯನ್ನು ಲಗತ್ತಿಸಿ ಬಿಜೆಪಿ ಟ್ವಿಟ್ ಮಾಡಿದ್ದು , " ಬಹುಶಃ ಕೆಪಿಸಿಸಿ ಕಂಡ ಅತ್ಯಂತ ಅಸಹಾಯಕ ಅಧ್ಯಕ್ಷ ಎಂಬ ಪಟ್ಟ ಡಿಕೆ ಶಿವಕುಮಾರ್ ಅವರಿಗೆ ಒಲಿದು ಬರಬಹುದು. ತಮ್ಮ ವಿರುದ್ಧ ಸಂಚು ರೂಪಿಸಿದ ವ್ಯಕ್ತಿಯ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವುದಕ್ಕೂ ಡಿಕೆಶಿ ಅಳುಕುತ್ತಿದ್ದಾರೆ. ಡಿಕೆಶಿ ಎದುರು ಸಿದ್ದರಾಮಯ್ಯ ಕೈ ಮೇಲಾಯಿತೇ?" ಎಂದು ಟೀಕಿಸಿದೆ.
"ಪಿಸುಮಾತು ಪ್ರಕರಣ ಸಂಬಂಧ ಉಪಚುನಾವಣೆ ಮುಗಿದ ಬಳಿಕ ಉತ್ತರ ಕೊಡುತ್ತೇನೆ ಎಂದಿದ್ದಡಿಕೆ ಶಿವಕುಮಾರ್ ಈಗ ಮೆತ್ತಗಾಗಿ ಬಿಟ್ಟಿದ್ದಾರೆ.ಸಿದ್ದರಾಮಯ್ಯ ಬಣದ ಉಗ್ರಪ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡರೆ ಎಲ್ಲಿ ಅಧ್ಯಕ್ಷ ಪಟ್ಟ ಕೈ ತಪ್ಪುತ್ತದೆಯೆಂಬ ಭಯವೇ?ಸಿದ್ದರಾಮಯ್ಯ ದಿಲ್ಲಿ ಪ್ರವಾಸದಿಂದ ಡಿಕೆಶಿ ಕುಗ್ಗಿ ಹೋಗಿದ್ದಾರೆಯೇ?" ಎಂದು ಬಿಜೆಪಿ ಪ್ರಶ್ನಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಕಚೇರಿಯ ವೇದಿಕೆಯಲ್ಲಿ ಭ್ರಷ್ಟಾಚಾರದ ಆರೋಪ ಮಾಡಿ ಸುದ್ದಿಯಾದ ಕಾಂಗ್ರೆಸ್ ಮಾಧ್ಯಮ ಸಂಯೋಜಕ ಸಲೀಂ ಅವರನ್ನು ಕಾಂಗ್ರೆಸ್ 6 ವರ್ಷಗಳ ಕಾಲ ಪಕ್ಷದಿಂದ ಅಮಾನತು ಮಾಡಿತ್ತು.