ಶ್ರೀನಗರ, ಅ.24 (DaijiworldNews/PY): ಜಮ್ಮು-ಕಾಶ್ಮೀರದ ಭಟ್ಟ ಡರ್ರಿಯರ್ ಅರಣ್ಯದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಭಾರತೀಯ ಯೋಧರು ಹಾಗೂ ಎಲ್ಇಟಿ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಮೂವರು ಶಸ್ತ್ರಸಜ್ಜಿತ ಸಿಬ್ಬಂದಿ ಹಾಗೂ ಎಲ್ಇಟಿ ಭಯೋತ್ಪಾದಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸಾಂದರ್ಭಿಕ ಚಿತ್ರ
"ಇಂದು ಬೆಳಗ್ಗೆ ಜಮ್ಮು- ಮತ್ತು ಕಾಶ್ಮೀರದ ಪೂಂಚ್ನ ಭಟ್ಟ ಡರ್ರಿಯನ್ ಅರಣ್ಯದಲ್ಲಿ ಭಾರೀ ಗುಂಡಿನ ದಾಳಿ ಹಾಗೂ ಸ್ಪೋಟ ನಡೆದಿರುವುದಾಗಿ ವರದಿಯಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ರಜೌರಿ ಜಿಲ್ಲೆಯ ಸುರಂಕೋಟೆ ಹಾಗೂ ಥನಮಂಡಿಗೆ ಹೊಂದಿಕೊಂಡಿರುವ ಸಮೀಪದ ಅರಣ್ಯ ಪ್ರದೇಶದ ಮೆಂಧರ್ನ ಭಟ್ಟ ಡರ್ರಿಯನ್ ಅರಣ್ಯದಲ್ಲಿ ಸಶಸ್ತ್ರ ಪಡೆಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
ಸುರಂಕೋಟೆ ಮತ್ತು ಮೆಂಧರ್ನಲ್ಲಿ ಅಕ್ಟೋಬರ್ 11ಹಾಗೂ 14ರಂದು ನಡೆಸಿದ ಪ್ರತ್ಯೇಕ ದಾಳಿಗಳಲ್ಲಿ 9 ಶಸ್ತ್ರಸಜ್ಜಿತ ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ.