ನವದೆಹಲಿ, ಅ.24 (DaijiworldNews/PY): ಪ್ರತಿಪಕ್ಷ ಕಾಂಗ್ರೆಸ್, ಟೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ದೇಶಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಿದ್ದು, ಈ ಹೋರಾಟ ನವೆಂಬರ್ 14ರಿಂದ 29ರವರೆಗೆ ನಡೆಯಲಿದೆ.
ಈ ಬಗ್ಗೆ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಮಾಹಿತಿ ನೀಡಿದ್ದು, "ಕೈ ನಾಯಕರು ತಮ್ಮ ಪ್ರದೇಶದಲ್ಲಿ ಪಾದಯಾತ್ರೆ ಮಾಡುವ ಮೂಲಕ ಹೋರಾಟ ನಡೆಸಲಿದ್ದಾರೆ" ಎಂದು ಹೇಳಿದ್ದಾರೆ.
"ಈ ಹೋರಾಟ ನವೆಂಬರ್ 14ರಿಂದ 29ರವರೆಗೆ ನಡೆಯಲಿದ್ದು, ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ. ಈ ಹೋರಾಟದಲ್ಲಿ ಕಾಂಗ್ರೆಸ್ ಸಮಿತಿಯ ಎಲ್ಲಾ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಬೇರೆ ಬೇರೆ ಪ್ರದೇಶದಲ್ಲಿ ವಿವಿಧ ನಾಯಕರು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ" ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ದ ಟೀಕಾ ಪ್ರಹಾರ ನಡೆಸಿರುವ ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ, "ತೆರಿಗೆಯನ್ನು ಆರ್ಬಿಐ ಸಲಹೆಯಂತೆ ಕಡಿಮೆ ಮಾಡಬೇಕು" ಎಂದು ಒತ್ತಾಯಿಸಿದ್ದಾರೆ.
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಆರ್ಬಿಐ ಹಣಕಾಸು ನೀತಿಯ ಮಿನಿಟ್ಸ್ನಲ್ಲಿ ಕಡಿಮೆ ಮಾಡಲು ಪರೋಕ್ಷ ತೆರಿಗೆಯನ್ನು ಕಡಿತಗೊಳಿಸುವಂತೆ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸಲಹೆ ನೀಡಿದ್ದಾರೆ.
"ಈ ಬಗ್ಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಅವರು ಸಲಹೆ ನೀಡಿದ್ದು, ಮಾಪನಾಂಕ ನಿರ್ಣಯವನ್ನು ಮಾಡುವುದು ಮುಖ್ಯ. ಇದರಿಂದ ಆರ್ಥಿಕತೆಯ ಮೇಲಿನಿಂದ ಉಂಟಾಗುವ ಬೆಲೆ ಒತ್ತಡವನ್ನು ತೆಗೆಯಬಹುದು. ಈ ಸಲುವಾಗಿ ತೆರಿಗೆಯನ್ನು ಕ್ರಮೇಣ ಕಡಿಮೆ ಮಾಡಬೇಕಾಗುತ್ತದೆ" ಎಂದಿದ್ದಾರೆ.
"ಸರಕು ಹಾಗೂ ಸೇವೆಗಳ ಮೇಲೆ ಕಚ್ಚಾತೈಲ, ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಹೆಚ್ಚಿನ ಪರೋಕ್ಷ ತೆರಿಗೆಯಿಂದಾಗಿ ಪ್ರಭಾವ ಬೀರಿದೆ. ಡಿಸೆಂಬರ್ನಲ್ಲಿ ಚಿಲ್ಲರೆ ಹಣದುಬ್ಬರ ದರ ಶೇ 5.5ಕ್ಕಿಂತ ಅಧಿಕವಾಗಿದೆ" ಎಂದು ಹೇಳಿದ್ದಾರೆ.