ಕೋಲ್ಕತ್ತ, ಅ.23 (DaijiworldNews/PY): "ಕೇಂದ್ರ ಸರ್ಕಾರದ ಕೊರೊನಾ ಲಸಿಕಾ ಅಭಿಯಾನದ ಅಂಕಿ, ಅಂಶಗಳಿಂದ ಜನರನ್ನು ಗೊಂದಲ ಮೂಡಿಸುತ್ತಿವೆ" ಎಂದು ಕಾಂಗ್ರೆಸ್ ನಾಯಕ ಅಧೀರ್ ಚೌಧರಿ ಹೇಳಿದ್ದಾರೆ.
ಈ ಬಗ್ಗೆ ಫೇಸ್ಬುಕ್ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಅವರು, "100 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ ಎನ್ನುವಂತೆ ಬಿಂಬಿಸಲಾಗುತ್ತಿದೆ" ಎಂದು ಆರೋಪಿಸಿದ್ದಾರೆ.
"100 ಕೋಟಿ ಡೋಸ್ ಲಸಿಕೆ ನೀಡಿದ್ದ ವೇಳೆ 100 ಸ್ಥಳಗಳಿಗೆ ದೀಪಾಲಂಕಾರ ಮಾಡಲಾಗಿತ್ತು. ಈ ಮುಖೇನ ಪ್ರಧಾನಿ ನರೇಂದ್ರ ಮೋದಿ 100 ಮಂದಿಗೆ ಲಸಿಕೆ ನೀಡಿದ್ದೇವೆ ಎನ್ನುವ ಸಂದೇಶ ರವಾನಿಸಲು ಪ್ರಯತ್ನಿಸಿದ್ದಾರೆ. ಆದರೆ, ಇದು ವಾಸ್ತವ ಸ್ಥಿತಿ ಅಲ್ಲ" ಎಂದಿದ್ದಾರೆ.
"ಭಾರತದ ಜನಸಂಖ್ಯೆ 139 ಕೋಟಿ. ಇದರಲ್ಲಿ 106 ಕೋಟಿ ಮಂದಿ ವಯಸ್ಕರಿದ್ದಾರೆ. 29 ಕೋಟಿ ಮಂದಿ ಡಬಲ್ ಡೋಸ್ ಲಸಿಕೆ ಪಡೆದುಕೊಂಡಿದ್ಧಾರೆ. ಆದರೆ, ಸಾಧನೆ ಪ್ರಮಾಣ ಶೇ.21ರಷ್ಟು ಮಾತ್ರ" ಎಂದು ತಿಳಿಸಿದ್ದಾರೆ.