ಅಸ್ಸಾಂ, ಅ 23 (DaijiworldNews/MS): ಹಿಂದೂ ಧರ್ಮದವನಂತೆ ಸೋಗು ಹಾಕಿ ಆ ನಂಬಿಕೆಯಿಂದ ಮಹಿಳೆಯನ್ನು ಮದುವೆಯಾದ ಮುಸ್ಲಿಂ ಪುರುಷನನ್ನು ಆತನ ಪತ್ನಿಯ ದೂರಿನ ಆಧಾರದ ಮೇಲೆ ಮಧ್ಯ ಅಸ್ಸಾಂನ ಹೊಜೈ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೊಜೈ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ (ಡಿಎಲ್ಎಸ್ಎ) ಸಹಾಯದಿಂದ ಮಹಿಳೆ ತನ್ನ ಪತಿ ವಿರುದ್ಧ ಹೋಜೈ ಪೊಲೀಸ್ ಅಧೀಕ್ಷಕರಿಗೆ ಲಿಖಿತ ದೂರು ನೀಡಿದ್ದಾರೆ ಎಂದು ಲುಮ್ಡಿಂಗ್ ಪೊಲೀಸ್ ಠಾಣಾಧಿಕಾರಿ (ಒಸಿ) ಎಸ್ಕೆ ಶರ್ಮಾ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಮಹಿಳೆಯು ಅಸ್ಸಾಂ ದೀಮಾಜಿ ಜಿಲ್ಲೆಯವರು. ಆರೋಪಿಯು ಲಂಬ್ಡಿಂಗ್ ಠಾಣೆಯ ವ್ಯಾಪ್ತಿಯ ನಿವಾಸಿಯಾಗಿದ್ದಾನೆ. ಇಬ್ಬರು ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಪರಿಚಯ ಬೆಳೆದಿತ್ತು. ತನ್ನನ್ನು ಹಿಂದೂ ಎಂದು ಪರಿಚಯಿಸಿಕೊಂಡಿದ್ದ ಆತ ಮದುವೆಯಾದ ಬಳಿಕ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡಲಾರಂಭಿಸಿದ್ದ. ಒಂದು ಹಂತದಲ್ಲಿ ಹಣದೊಂದಿಗೆ ಪರಾರಿಯಾಗಿದ್ದ ಎಂದು ಅವರು ದೂರಿನಲ್ಲಿ ತಿಳಿಸಿದ್ದರು.
ಆರೋಪಿಯನ್ನು ಬಂಧಿಸಿದ್ದು, ಸ್ಥಳೀಯ ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಧರ್ಮವನ್ನು ಮುಚ್ಚಿಟ್ಟು ಮದುವೆ ಆಗಿದ್ದು ಇದು, ಲವ್ ಜಿಹಾದ್ ಪ್ರಕರಣ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.