ಬೆಳಗಾವಿ, ಅ.23 (DaijiworldNews/HR): ಪತ್ನಿಸಾವನ್ನಪ್ಪಿದ್ದರಿಂದಾಗಿ ಮನನೊಂದಂತ ಪತಿ ತನ್ನ ನಾಲ್ವರು ಮಕ್ಕಳಿಗೆ ವಿಷವುಣಿಸಿ ಬಳಿಕ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕೋಡಿಯ ಬೋರಗಲ್ ಗ್ರಾಮದಲ್ಲಿ ನಡೆದಿದೆ.
ಮಾನಸಿಕವಾಗಿ ನೊಂದಿದ್ದಂತ ಮಾಜಿ ಯೋಧ ಗೋಪಾಲ ಹಾದಿಮನಿ ಅವರು ಮಕ್ಕಳಾದ ಸೌಮ್ಯ ಹಾದಿಮನಿ(19), ಶ್ವೇತಾ ಹಾದಿಮನಿ (16), ಸಾಕ್ಷಿ ಹಾದಿಮನಿ(11) ಹಾಗೂ ಸೃಜನ ಹಾದಿಮನಿ ( 8) ವರ್ಷದ ನಾಲ್ವರು ಮಕ್ಕಳಿಗೆ ವಿಷವಿಕ್ಕಿ ಬಳಿಕ ತಾವು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೋರಗಲ್ ಗ್ರಾಮದಲ್ಲಿನ ಗೋಪಾಲ್ ಹಾದಿಮನಿ ಪತ್ನಿ ಜಯಾ, ಜುಲೈ 6ರಂದು ಬ್ಲಾಕ್ ಫಂಗಸ್ ನಿಂದಾಗಿ ಸಾವನ್ನಪ್ಪಿದ್ದು, ಇದರಿಂದ ಮಾನಸಿಕವಾಗಿ ಅವರ ಪತಿ ಗೋಪಾಲ ಹಾದಿಮನಿ ನೊಂದಿದ್ದರು.
ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಸಂಕೇಶ್ವರ ಪೊಲೀಸರು, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.