ನವದೆಹಲಿ, ಅ 23 (DaijiworldNews/MS): "ಎಲ್ಲರಿಗೂ ಲಸಿಕೆ" ಎಂಬ ನಿಯಮ ಪಾಲನೆಗೆ ಅವಶ್ಯಕತೆ ಇರುವ ಕೊರೊನಾ ಲಸಿಕೆ ಉತ್ಪಾದನೆಗೆ ಆದ್ಯತೆ ನೀಡುವಂತೆ ದೃಷ್ಟಿಯಲ್ಲಿ ಹಾಗೂ ದೇಶವು 100 ಕೋಟಿ ಡೋಸ್ ಜಬ್ಸ್ ನೀಡುವ ಹೆಗ್ಗುರುತನ್ನು ಸಾಧಿಸಿದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ಏಳು ಭಾರತೀಯ ಕೋವಿಡ್ -19 ಲಸಿಕೆ ತಯಾರಕರೊಂದಿಗೆ ಸಭೆ ನಡೆಸಿದ್ದಾರೆ.
ಲಸಿಕಾ ತಯಾರಿಕಾ ಸಂಸ್ಥೆಗಳಾದ ಸೆರಮ್, ಭಾರತ್ ಬಯೋಟೆಕ್, ಡಾ.ರೆಡ್ಡಿಸ್ ಲ್ಯಾಬ್, ಝೀಡಸ್ ಕ್ಯಾಡಿಲ್ಲಾ, ಬಯೋಲಾಜಿಕಲ್-ಇ, ಜಿನ್ನೋವಾ ಬಯೋಫಾರ್ಮ ಮತ್ತು ಪೆನೆಷಿಯಾ ಬಯೋಟೆಕ್ ಸಂಸ್ಥೆಯ ಮುಖ್ಯಸ್ಥರುಗಳೊಂದಿಗೆ ಮೋದಿ ಮಾತುಕತೆ ನಡೆಸಿದರು.
ಇದುವರೆಗೂ ಲಸಿಕೆ ಪಡೆಯದವರಿಗೆ ಅದಷ್ಟು ಶೀಘ್ರ ಲಸಿಕೆ ಲಭಿಸಬೇಕು ಹಾಗೂ ಎಲ್ಲರಿಗೂ ಲಸಿಕೆ ಮಂತ್ರದ ಆಧಾರದ ಮೇಲೆ ಅವಶ್ಯಕತೆ ಇರುವ ದೇಶಗಳಿಗೆ ಲಸಿಕೆ ಸರಬರಾಜು ಮಾಡುವತ್ತ ಗಮನ ಹರಿಸುವಂತೆ ಮೋದಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಶನಿವಾರ ಬೆಳಿಗ್ಗೆ 7 ಗಂಟೆಗೆ ನವೀಕರಿಸಿದ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ನೀಡಲಾದ ಸಂಚಿತ ಕೋವಿಡ್ -19 ಲಸಿಕೆ ಪ್ರಮಾಣ 101.30 ಕೋಟಿ ಮೀರಿದೆ.ಅಕ್ಟೋಬರ್ 21 ರಂದು ಭಾರತವು ಕೋವಿಡ್ -19 ವಿರುದ್ಧದ ತನ್ನ ಲಸಿಕೆ ಕಾರ್ಯಕ್ರಮದಲ್ಲಿ ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ.
ಆರೋಗ್ಯ ಸಚಿವಾಲಯದ ಅಧಿಕಾರಿಗಳ ಪ್ರಕಾರ, ದೇಶದ ಸುಮಾರು ಶೇಕಡ 31 ರಷ್ಟು ವಯಸ್ಕರಲ್ಲಿ ಸುಮಾರು 93 ಕೋಟಿ ವಯಸ್ಕರಿಗೆ ಎರಡೂ ಡೋಸ್ಗಳನ್ನು ನೀಡಲಾಗಿದೆ.