ನವದೆಹಲಿ, ಅ.23 (DaijiworldNews/PY): ಇಂಟರ್ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಪಾಪ್ಯುಲೇಶನ್ ಸೈನ್ಸಸ್ ಹಾಗೂ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಹೊಸ ಜಂಟಿ ಅಧ್ಯಯನದ ಸಂಶೋಧನೆಗಳನ್ನು ಬಿಡುಗಡೆ ಮಾಡಿದ್ದು, 2020 ರಲ್ಲಿ ಕೊರೊನಾದಿಂದಾಗಿ ಭಾರತದಲ್ಲಿ ಜನರ ಜೀವಿತಾವಧಿಯು ಎರಡು ವರ್ಷಗಳಷ್ಟು ಕಡಿಮೆ ಆಗಿದೆ ಎಂದು ತಿಳಿಸಿದೆ.
ಲೇಖಕರ ಪ್ರಕಾರ, 35-79 ವಯೋಮಾನದವರಲ್ಲಿ ಕೊರೊನಾದಿಂದ ಉಮಟಾದ ಹೆಚ್ಚಿನ ಸಾವುಗಳಿಂದಾಗಿ ಈ ಬದಲಾವಣೆ ಉಂಟಾಗಿದೆ.
ಕೊರೊನಾದಿಂದ ಸುಮಾರು ಎರಡು ವರ್ಷಗಳ ಕಾಲ ಭಾರತದಲ್ಲಿನ ಮನುಷ್ಯರ ಜೀವಿತಾವಧಿಯಲ್ಲಿ ಕುಸಿತ ಉಂಟು ಮಾಡಿದೆ ಎಂದು ನಗರ ಮೂಲದ ಅಂತರಾಷ್ಟ್ರೀಯ ಜನಸಂಖ್ಯಾ ಅಧ್ಯಯನ ಸಂಸ್ಥೆಯ ವಿಜ್ಞಾನಿಗಳ ಅಂಕಿಅಂಶಗಳ ವಿಶ್ಲೇಷಣೆ ಬಹಿರಂಗಪಡಿಸಿದೆ.
"ಸಾಂಕ್ರಾಮಿಕ ರೋಗದಿಂದ ಉಂಟಾಗುವ ವಯಸ್ಸುವಾರು ಮರಣ ಅಡಚಣೆಗಳು ಮಹಿಳೆಯರಿಗಿಂತ ಹೆಚ್ಚು ಪುರುಷರ ಮೇಲೆ ಪರಿಣಾಮ ಬೀರಿವೆ. ವಯೋಮಾನದವರ ಸಾವುಗಳಲ್ಲಿ ಅಸಮಾನತೆಯು ಪುರುಷರಲ್ಲಿ ಹೆಚ್ಚಾಗಿದೆ" ಎಂದು ಐಐಪಿಎಸ್ನ ಪತ್ರಿಕೆಯ ಲೇಖಕ ಸೂರ್ಯಕಾಂತ್ ಯಾದವ್ ಅವರು ತಿಳಿಸಿದ್ದಾರೆ.
"ಜೀವಿತಾವಧಿಯ ಜನಸಂಖ್ಯೆಯು ಒಟ್ಟಾರೆ ಮರಣ ಮಟ್ಟವನ್ನು ಪ್ರತಿಬಿಂಬಿಸುತ್ತದೆ ಎಂದು" ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಈ ಅಧ್ಯಯನಕ್ಕಾಗಿ ಲೇಖಕರು, ಜನವರಿ 30, 2020 ಹಾಗೂ ಡಿಸೆಂಬರ್ 31, 2020 ರ ನಡುವೆ ಕೊರೊನಾ ಇಂಡಿಯಾ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ ಪೋರ್ಟಲ್ನಿಂದ ಸಾರ್ವಜನಿಕ ಡೊಮೇನ್ನಲ್ಲಿ ಲಭ್ಯವಿರುವ ಡೇಟಾವನ್ನು ಅಧ್ಯಯನಕ್ಕೆ ಪರಿಗಣಿಸಿದ್ದಾರೆ.
"ನಾವು ದತ್ತಾಂಶ ಸೆಟ್ಗಳನ್ನು ಒಗ್ಗೂಡಿಸಿದ್ದು, ಒಟ್ಟಾರೆ ಕೊರೊನಾ ಸೇರ್ಪಡೆಯೊಂದಿಗೆ ಸಾವಿಗೆ 22 ಕಾರಣಗಳನ್ನು ಅಧ್ಯಯನಕ್ಕೆ ಒಳಪಡಿಸಿದ್ದೇವೆ. ಕೊರೊನಾ ಪರಿಣಾವನ್ನು ವಿಶ್ಲೇಷಿಸಲು ನಾವು ಲೈಫ್ ಟೇಬಲ್ ವಿಧಾನವನ್ನು ಬಳಿಸಿದ್ದೇವೆ ಹಾಗೂ ಈ ಅಧ್ಯಯನದಿಂದ ಜನರ ಜೀವಿತಾವಧಿಯಲ್ಲಿ ಎರಡು ವರ್ಷಗಳ ಕುಸಿತವನ್ನು ಕಂಡುಕೊಂಡಿದ್ದೇವೆ" ಎಂದಿದ್ದಾರೆ.