ಮುಂಬೈ,ಅ.23 (DaijiworldNews/HR): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಕ್ಟೋಬರ್ 22ರಂದು 57ನೇ ವಸಂತಕ್ಕೆ ಕಾಲಿಟ್ಟಿದ್ದು, ಈ ಹಿನ್ನೆಲೆಯಲ್ಲಿ ಸಾರಾ ಅವರು ಟ್ವೀಟ್ ಮಾಡುವ ಮೂಲಕ ಅಮಿತ್ ಷಾ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಆದರೆ ಇದು ನೆಟ್ಟಿಗರ ಟ್ರೋಲ್ಗೆ ಗುರಿಯಾಗಿದೆ.
ಬಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಅವರ ಮಗ ಆರ್ಯನ್ ಜೈಲಿನಲ್ಲಿ ಉಳಿದಿದ್ದರೆ, ಅನನ್ಯಪಾಂಡೆ ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಎನ್ ಸಿಬಿಯ ವಿಚಾರಣೆ ಎದುರಿಸುತ್ತಿದ್ದು, ಇದರ ನಡುವೆ ಸಾರಾ ಅಲಿ ಖಾನ್ ಅವರು ಅಮಿತ್ ಶಾ ಅವರಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿ ಟ್ರೋಲ್ ಗೆ ಗುರಿಯಾಗಿದ್ದಾರೆ.
ಇನ್ನು ಸಾರಾ ಅಲಿಖಾನ್ ಅವರು ಗೃಹ ಸಚಿವರ ಅಮಿತ್ ಶಾ ವಿಶ್ವಾಸ ಗಳಿಸುವ ಮೂಲಕ ಎನ್ ಸಿಬಿಯಿಂದ ತಮ್ಮನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ನೆಟ್ಟಿಗರು ಅವರನ್ನು ಟ್ರೋಲ್ ಮಾಡಿದ್ದಾರೆ.