ನವದೆಹಲಿ, ಅ 23 (DaijiworldNews/MS): ಹಿಂದುತ್ವದ ಸಿದ್ಧಾಂತ ಎನ್ನುವುದು ಎಡವೂ ಅಲ್ಲ, ಬಲವೂ ಅಲ್ಲ ಎಂದು ಆರ್ಎಸ್ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಶುಕ್ರವಾರ ಹೇಳಿದ್ದಾರೆ.
ಆರೆಸ್ಸೆಸ್ ನಾಯಕ ರಾಮ್ ಮಾಧವ್ ಬರೆದಿರುವ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು" ಜಗತ್ತು ಎಡಕ್ಕೆ ಹೋಗಿದೆ, ಅಥವಾ ಎಡಕ್ಕೆ ಹೋಗಲು ಬಲವಂತವಾಗಿ ಕರೆದೊಯ್ಯಲಾಯಿತು. ಆದರೆ ಸದ್ಯದ ಪರಿಸ್ಥಿತಿಯು ಬದಲಾಗಿದ್ದು ಜಗತ್ತು ಬಲಕ್ಕೆ ಚಲಿಸುತ್ತಿದೆ, ಆದ್ದರಿಂದ ಇದೀಗ ಕೇಂದ್ರದಲ್ಲಿದೆ. . ಹಿಂದುತ್ವ ಎಂದರೆ ಎಡವೂ ಅಲ್ಲ, ಬಲವೂ ಅಲ್ಲ. ಎಲ್ಲವನ್ನು ಒಳಗೊಳ್ಳುವುದು ಇದರ ಸಿದ್ಧಾಂತ ” ಎಂದು ಹೇಳಿದರು.
ಬ್ರಿಟಿಷ್ ವಸಾಹತುಶಾಹಿ ವ್ಯವಸ್ಥೆಯಿಂದ ಎರವಲು ಪಡೆದ ಭಾರತೀಯ ನ್ಯಾಯಾಂಗ ವ್ಯವಸ್ಥೆಯು ರಾಷ್ಟ್ರಕ್ಕೆ ಪ್ರಸ್ತುತವಲ್ಲ ಎಂದು ಹೊಸಬಾಳೆ ಹೇಳಿದರು. ಅವರ ವಾದವನ್ನು ಮತ್ತಷ್ಟು ಪುಷ್ಟೀಕರಿಸಲು, ಅವರು ಮಹಾತ್ಮ ಗಾಂಧಿಯವರ ಹಿಂದ್ ಸ್ವರಾಜ್ ಪ್ರವಚನ ಮತ್ತು ಭಾರತದ ನ್ಯಾಯಾಂಗ ವ್ಯವಸ್ಥೆಯು ದೇಶಕ್ಕೆ ಸರಿಹೊಂದುವುದಿಲ್ಲ ಎಂದು ಭಾರತದ ಮುಖ್ಯ ನ್ಯಾಯಾಧೀಶರ ಇತ್ತೀಚಿನ ಹೇಳಿಕೆಯನ್ನು ಉಲ್ಲೇಖಿಸಿದರು.
ಹಿಂದುತ್ವದ ಸರ್ವವ್ಯಾಪಕ ಬಗ್ಗೆ ಮಾತನಾಡಿದ ಹೊಸಬಾಳೆಯವರು , ಹಿಂದುತ್ವದ ಮೂಲತತ್ವವೆಂದರೆ ಪ್ರತಿಯೊಂದು ಮೂಲೆಯಿಂದಲೂ ಅತ್ಯುತ್ತಮವಾದದ್ದನ್ನು ತೆಗೆದುಕೊಂಡು ಅದನ್ನು ನಿಮ್ಮ ಅಗತ್ಯಗಳಿಗೆ, ಸುತ್ತಮುತ್ತಲಿನ ಮತ್ತು ಜೀವನಕ್ಕೆ ತಕ್ಕಂತೆ ರೂಪಿಸುವುದು ಎಂದು ಹೇಳಿದರು.