ನವದೆಹಲಿ, ಅ 23 (DaijiworldNews/MS): ಪ್ರತಿಕೂಲ ಹವಮಾನದಿಂದ ಉತ್ತರಾಖಂಡದಲ್ಲಿ ಅ.18 ರಂದು ನಾಪತ್ತೆಯಾಗಿದ್ದ ಚಾರಣಿಗರ ತಂಡದ ಇನ್ನಿಬ್ಬರು ಮೃತರಾಗಿದ್ದು, ಸಾವಿನ ಸಂಖ್ಯೆ ಹನ್ನೊಂದಕ್ಕೆ ತಲುಪಿದೆ, ಉಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ತಂಡದ ಇಬ್ಬರು ಸದಸ್ಯರನ್ನು ಗುರುವಾರ ರಕ್ಷಿಸಲಾಗಿತ್ತು. ಗಾಯಗೊಂಡಿರುವ ಅವರು, ಹರ್ಸಿಲ್ ಮತ್ತು ಉತ್ತರಕಾಶಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉತ್ತರಕಾಶಿಯ ಹರ್ಸಿಲ್ ಮೂಲಕ ಹಿಮಾಚಲ ಪ್ರದೇಶದ ಚಿತ್ಕುಲ್ಗೆ ಚಾರಣಕ್ಕೆ ತೆರಳಿದ್ದ ಅವರು ನಾಪತ್ತೆಯಾಗಿದ್ದರು.
ಇನ್ನು ಭಾರತೀಯ ವಾಯುಪಡೆಯು ಲಂಖಗಾ ಪಾಸ್ನಲ್ಲಿ 17,000 ಅಡಿ ಎತ್ತರದಲ್ಲಿ ಭಾರತೀಯ ವಾಯುಪಡೆಯು ಬೃಹತ್ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
ಅಕ್ಟೋಬರ್ 20ರಂದು ಅಧಿಕಾರಿಗಳು ಮಾಡಿದ ಎಸ್ ಒಎಸ್ ಕರೆಗೆ ಐಎಎಫ್ ಪ್ರತಿಕ್ರಿಯಿಸಿ ಹರ್ಸಿಲ್ ತಲುಪಲು ಎರಡು ಸುಧಾರಿತ ಲಘು ಹೆಲಿಕಾಪ್ಟರ್ ಗಳನ್ನು ನಿಯೋಜಿಸಿತು. ಮತ್ತು ಅಂದೇ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯ ಮೂವರು ಸಿಬ್ಬಂದಿ ಎಎಲ್ ಎಚ್ ಕ್ರಾಫ್ಟ್ ನಲ್ಲಿ ಮಧ್ಯಾಹ್ನ ಗರಿಷ್ಠ 19500 ಅಡಿ ಎತ್ತರದಲ್ಲಿ ಶೋಧ ಮತ್ತು ರಕ್ಷಣೆ ಪ್ರಾರಂಭಿಸಿದ್ದರು.