ಹಾನಗಲ್, ಅ.22 (DaijiworldNews/HR): ಹಾನಗಲ್ ವಿಧಾನಸಭಾ ಕ್ಷೇತ್ರದ ಬೊಮ್ಮನಹಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಗಳಲ್ಲಿ ಬರುವ ಗ್ರಾಮ ಪಂಚಾಯತ್ ಗಳಾದ ಕೊಪ್ಪರಿಸಿ ಕೊಪ್ಪ, ಬೊಮ್ಮನಹಳ್ಳಿ ಗ್ರಾ ಪಂ, ಕರಗುದುರಿ ಗ್ರಾ ಪಂ,ಹುಲ್ಲತ್ತಿ ಗ್ರಾ ಪಂ,ಬೈಚುಳ್ಳಿ ಗ್ರಾ ಪಂ, ಏಳವಟ್ಟಿ ಗ್ರಾ ಪಂ ವ್ಯಾಪ್ತಿಯಗಳಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ಯವರ ನೇತೃತ್ವದ ತಂಡದಿಂದ ಬಿರುಸಿನ ಚುನಾವಣೆ ಪ್ರಚಾರ ಕೈಗೊಂಡಿತ್ತು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಡಿ ಆರ್ ಪಾಟೀಲ್, ಮಾಜಿ ಶಾಸಕರಾದ ರಾಮ್ ಕೃಷ್ಣ, ಕಾಂಗ್ರೆಸ್ ಮುಖಂಡರಾದ ಮುಕುಂದ್ರ ರಾವ್ ಭವಾನಿ ಮಟ್, ವ್ಯಾಪ್ತಿಯ ಜಿಲ್ಲಾ ಪಂಚಾಯತ್ ಸದಸ್ಯರಾದ ಯಸಿರ್ ಖಾನ್ ಫಾಟನ್, ಕೆಪಿಸಿಸಿ ಸಂಯೋಜಕರಾದ ಅನಿತಾ ರಾವ್ ಪ್ರಮುಖರಾದವರು ಉಪಸ್ಥಿತರಿದ್ದರು.