ಬೆಂಗಳೂರು, ಅ.22 (DaijiworldNews/HR): ಕರ್ನಾಟಕದಲ್ಲಿ ಈಗ ಗಾಂಧಿ ಕಾಂಗ್ರೆಸ್ ಇಲ್ಲ. ಡುಪ್ಲಿಕೇಟ್ ಕಾಂಗ್ರೆಸ್ ಇದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಅವರು, "180 ಸೀಟು ಹೊಂದಿದ್ದ ಕಾಂಗ್ರೆಸ್ ಈಗ 60-40ಕ್ಕೆ ಕುಸಿದಿದ್ದು, ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಕಾಂಗ್ರೆಸ್ ಠೇವಣಿ ಕೂಡ ಉಳಿಸಿಕೊಂಡಿಲ್ಲ. ಹೀಗಾಗಿ ಇದೊಂದು ಡುಪ್ಲಿಕೇಟ್ ಕಾಂಗ್ರೆಸ್" ಎಂದಿದ್ದಾರೆ.
ಆರ್ಎಸ್ಎಸ್ ವಿಚಾರವಾಗಿ ಮಾತನಾಡಿದ ಅವರು, "ಆರ್ಎಸ್ಎಸ್ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಜನರ ಸೇವೆ ಮಾಡೋದು ಅಷ್ಟೇ ನನಗೆ ಗೊತ್ತಿದೆ" ಎಂದರು.
ಇನ್ನು "ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರೋದಕ್ಕೆ ಕಾಂಗ್ರೆಸ್ನವರೇ ಕಾರಣವಾಗಿದ್ದು, ತುಮಕೂರಿನಲ್ಲಿ ದೇವೇಗೌಡರನ್ನು ಸೋಲಿಸಲು ಕಷ್ಟ ಪಟ್ಟಿದ್ದು ಯಾರು? ಎಂದು ಪ್ರಶ್ನಿಸಿದ್ದಾರೆ.