ಲಕ್ನೋ, ಅ.22 (DaijiworldNews/HR): ಕಾಂಗ್ರೆಸ್ ಪಕ್ಷವು ಆಡಳಿತಲ್ಲಿದ್ದಾಗ ಕೊರೊನಾ ಸೋಂಕು ಬಂದಿದ್ದರೇ ಅಣ್ಣ-ತಂಗಿ ಇಬ್ಬರು ಕೂಡ ಇಟಲಿಗೆ ಓಡಿ ಹೋಗುತ್ತಿದ್ದರು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಕಾಂಗ್ರೆಸ್ ಪಕ್ಶ್ಜದ ಆಡಳಿತದ ಅವಧಿಯಲ್ಲಿ ಕೊರೊನಾ ಸೋಂಕು ಬಂದಿದ್ದರೇ ಅಣ್ಣ-ತಂಗಿ ಇಬ್ಬರು ಇಟಲಿಗೆ ಓಡಿ ಹೋಗುತ್ತಿದ್ದರು, ಸಮಾಜವಾದಿ ಪಕ್ಷದ ಸರ್ಕಾರ ಇದ್ದಿದ್ದರೆ, ಚಿಕ್ಕಪ್ಪ ಮತ್ತು ಸೋದರಳಿಯರ ನಡುವೆ ಸೂಕ್ತ ಸಹಾಯಕ್ಕಾಗಿ ಸ್ಪರ್ಧೆ ಏರ್ಪಡುತ್ತಿತ್ತು, "ಬೆಹನ್ ಜಿ" ಸರ್ಕಾರ ಇದ್ದಿದ್ದರೇ ಏನಾಗಬಹುದಿತ್ತೆಂದು ದೇವರಿಗೆ ಮಾತ್ರ ಗೊತ್ತು ಎಂದಿದ್ದಾರೆ.
ಇನ್ನು ನವೆಂಬರ್ 2, 1990 ರಂದು ಬಿಜೆಪಿ ಸರ್ಕಾರವಿದ್ದಿದ್ದರೇ ರಾಮಭಕ್ತರ ಮೇಲೆ ಗುಂಡು ಹಾರಿಸಲು ಯಾರೂ ಧೈರ್ಯ ಮಾಡುತ್ತಿರಲಿಲ್ಲ. ಗುಂಡು ಹಾರಿಸಿದವರು 'ರಾಮದ್ರೋಹಿ' ಆಗಿದ್ದು, ಮತ ಬ್ಯಾಂಕ್ಗಾಗಿ ರಾಮ ಸೇವಕರ ಮೇಲೆ ಗುಂಡು ಹಾರಿಸಲು ಆದೇಶಿಸಿದರು. ರಾಮನಿಗೆ ಸೇರದವರು ನಮಗೂ ಸೇರುವುದಿಲ್ಲ" ಎಂದು ಹೇಳಿದ್ದಾರೆ.