ಬೆಂಗಳೂರು, ಅ.22 (DaijiworldNews/HR): ಪ್ರಧಾನಿ ಮೋದಿಯವರನ್ನು ಟೀಕಿಸದೇ ಹೋದರೆ ಕಾಂಗ್ರೆಸ್ ನವರಿಗೆ ತಿಂದಿದ್ದು ಜೀರ್ಣ ಆಗಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶತಕೋಟಿ ಲಸಿಕಾ ಸಂಭ್ರಮಕ್ಕೆ ಟ್ವೀಟ್ ಮೂಲಕ ಕಿಡಿಕಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ವಿಶ್ವ ಆರೋಗ್ಯ ಸಂಸ್ಥೆಯೇ ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಲಸಿಕೆ ನೀಡಿದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದು, ಹೀಗಿರುವಾಗ ಸಣ್ಣಪುಟ್ಟ ಜನ ಈ ಬಗ್ಗೆ ಮಾತನಾಡಿದರೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಆ ಕಮೆಂಟ್ಗೆ ನಯಾಪೈಸೆ ಬೆಲೆಯಿಲ್ಲ" ಎಂದಿದ್ದಾರೆ.
ಇನ್ನು "ಸಿದ್ದರಾಮಯ್ಯ ಹೀಗೆ ಮಾತಾಡುತ್ತಾ ಇರಲಿ, ಅದಕ್ಕೂ ಕಳೆ ಬರುತ್ತೆ. ಮೋದಿಯವರನ್ನು ಟೀಕಿಸದೇ ಹೋದರೆ ಕಾಂಗ್ರೆಸ್ ನವರಿಗೆ ತಿಂದಿದ್ದು ಜೀರ್ಣ ಆಗಲ್ಲ. ಕುಡಿಯುವ ನೀರು ಅರಗಲ್ಲ. ಯಾವುದನ್ನು ಟೀಕಿಸಬೇಕು ಎಂಬ ಪರಿಜ್ಞಾನ ಕೂಡ ಸಿದ್ದರಾಮಯ್ಯನವರಿಗೆ ಇಲ್ಲ" ಎಂದು ಕಿಡಿಕಾರಿದ್ದಾರೆ.