ನವದೆಹಲಿ, ಅ 22 (DaijiworldNews/MS): ಭಾರತವು ಲಸಿಕೆ ಹಾಕಲು ಆರಂಭಿಸಿದ ಸುಮಾರು 9 ತಿಂಗಳಲ್ಲಿ 21 ಅಕ್ಟೋಬರ್ 2021 ರಂದು 100 ಕೋಟಿ ಡೋಸ್ಗಳ ಲಸಿಕೆ ನೀಡಿಕೆಯನ್ನು ಪೂರ್ಣಗೊಳಿಸಿದೆ, ಈ ಸಂದರ್ಭದಲ್ಲಿ ನಾನು ಎಲ್ಲ ಆರೋಗ್ಯ ಸಮುದಾಯದ ಕಾರ್ಯಕರ್ತರು, ವೈದ್ಯರು, ದೇಶದ ನಾಗರಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶವಾಸಿಗಳನ್ನುದ್ದೇಶಿಸಿ ಹೇಳಿದ್ದಾರೆ.
100 ಕೋಟಿ ಡೋಸ್ಗಳ ಲಸಿಕೆ ನೀಡಿಕೆಯನ್ನು ಪೂರೈಸಿದ ದಿನದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದು, ಕರೊನಾ ವಿರುದ್ಧದ ಅಭೂತಪೂರ್ವ ಯಶಸ್ಸನ್ನು ಜನತೆಗೆ ಅರ್ಪಿಸಿದ್ದು, ವ್ಯಾಕ್ಸಿನೇಷನ್ ನಲ್ಲಿ ಭಾರತ ಜಗತ್ತಿನಲ್ಲಿಯೇ 2ನೇ ಸ್ಥಾನದಲ್ಲಿದೆ. ಲಸಿಕೆ ನೀಡಿಕೆಯಲ್ಲಿ ಇಂದು ಭಾರತ ಜಗತ್ತಿಗೆ ಮಾದರಿಯಾಗಿದೆ ಇದು ಕೇವಲ ಸಂಖ್ಯೆಯಲ್ಲ, ಹೊಸ ಭಾರತದ ಹೊಸ ಅಧ್ಯಾಯದ ಆರಂಭ ಎಂದಿದ್ದಾರೆ.
ವಿಐಪಿ ಸಂಸ್ಕೃತಿಯು ನಮ್ಮ ವ್ಯಾಕ್ಸಿನೇಷನ್ ಕಾರ್ಯಕ್ರಮ ಆವರಿಸಿಕೊಳ್ಳುತ್ತಿದ್ದಂತೆ ಖಾತ್ರಿಪಡಿಸಿದ್ದೇವೆ ಮತ್ತು ಎಲ್ಲರನ್ನೂ ಸಮಾನವಾಗಿ ಪರಿಗಣಿಸಲಾಗುತ್ತದೆ. ಸೋಂಕನ್ನು ಸಮರ್ಥವಾಗಿ ನಾವು ಭಾರತೀಯರು ಎದುರಿಸಿದ್ದೇವೆ, ಕಳೆದ ಜನವರಿಯಲ್ಲಿ ಕೊರೋನಾ ಲಸಿಕೆ ಬಂದ ಮೇಲೆ 9 ತಿಂಗಳಲ್ಲಿ ಸಾಧನೆ ಮಾಡಿದ್ದೇವೆ. ಸವಾಲನ್ನು ಸಮರ್ಥವಾಗಿ ಎದುರಿಸಿದ್ದೇವೆ. ಅದರ ಪರಿಣಾಮವೇ ಇಂದು ಶತಕೋಟಿ ಲಸಿಕೆ, ನಮ್ಮ ದೇಶದ ಸಾಮರ್ಥ್ಯದ ಪ್ರತಿಬಿಂಬವಾಗಿದೆ ಭಾರತದ ಸಂಪೂರ್ಣ ಲಸಿಕಾ ಕಾರ್ಯಕ್ರಮವು ವಿಜ್ಞಾನ ಚಾಲಿತ ಮತ್ತು ವಿಜ್ಞಾನ ಆಧಾರಿತವಾಗಿದೆ ಎಂಬ ಅಂಶದ ಬಗ್ಗೆ ನಾವು ಹೆಮ್ಮೆ ಪಡಬೇಕು. ಇದು ಸಂಪೂರ್ಣವಾಗಿ ವೈಜ್ಞಾನಿಕ ವಿಧಾನಗಳನ್ನು ಆಧರಿಸಿದೆ ಎಂದು ಹೇಳಿದ್ದಾರೆ.