ಮುಂಬೈ, ಅ 22 (DaijiworldNews/MS): ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ವಶಪಡಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ಮಾದಕವಸ್ತುಗಳ ನಿಯಂತ್ರಣ ಘಟಕ (ಎನ್ಸಿಬಿ) ಮತ್ತಷ್ಟೂ ಚುರುಕುಗೊಳಿಸಿದ್ದು ನಟ ಚಂಕಿ ಪಾಂಡೆ ಪುತ್ರಿ ನಟಿ ಅನನ್ಯಾ ಪಾಂಡೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ನಗರದ ಬಲ್ಲಾರ್ಡ್ ಎಸ್ಟೇಟ್ನಲ್ಲಿರುವ ಕಚೇರಿಯಲ್ಲಿ ಅನನ್ಯಾ ಪಾಂಡೆಯನ್ನು ಎರಡೂವರೆ ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ ಎನ್ಸಿಬಿ ಅಧಿಕಾರಿಗಳು, ಅ.22ರ ಶುಕ್ರವಾರ ಪುನಃ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಆರ್ಯನ್ ಖಾನ್ ವಾಟ್ಸ್ ಆಪ್ ಚಾಟ್ ಗಳ ಪ್ರಿಶೀಲನೆ ವೇಳೆ ಅನನ್ಯಾ ಪಾಂಡೆ ಹೆಸರು ಕೇಳಿಬಂದಿತ್ತು. ಅವರಿಬ್ಬರೂ ಡ್ರಗ್ಸ್ ವಿಚಾರದಲ್ಲಿ ಚಾಟ್ ಮಾಡಿರುವ ಅನುಮಾನದ ಹಿನ್ನಲೆಯಲ್ಲಿ ಅವರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ
ಇದಕ್ಕೂ ಮುನ್ನ, ಬಾಂದ್ರಾದಲ್ಲಿರುವ ನಟಿಯ ಮನೆಗೂ ಭೇಟಿ ನೀಡಿದ ಎನ್ಸಿಬಿ ಅಧಿಕಾರಿಗಳಿದ್ದ ತಂಡ, ಮೊಬೈಲ್ ಫೋನ್ ಸೇರಿ ಕೆಲವು ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ವಶಪಡಿಸಿಕೊಂಡಿದೆ.