ಮುಂಬೈ, ಅ.21 (DaijiworldNews/HR): ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ ಖಾನ್ ಮತ್ತು ಅರ್ಬಾಜ್ ಮರ್ಚೆಂಟ್ ಸೇರಿದಂತೆ ಎಂಟು ಆರೋಪಿಗಳ ನ್ಯಾಯಾಂಗ ಬಂಧನವನ್ನು ಮುಂಬೈನ ವಿಶೇಷ ಎನ್ ಸಿಬಿ ನ್ಯಾಯಾಲಯ ಅಕ್ಟೋಬರ್ 30ರವರೆಗೆ ವಿಸ್ತರಿಸಿದೆ.
ಆರೋಪಿಗಳನ್ನು ದೈಹಿಕವಾಗಿ ಅಥವಾ ವೀಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿಲ್ಲ. ಆರ್ಯನ್ ಖಾನ್ ಅವರನ್ನು ಈ ಮೊದಲು ಅಕ್ಟೋಬರ್ 7 ರಂದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು.
ಇನ್ನು ನಟಿ ಅನನ್ಯ ಪಾಂಡೆಯವರ ಮುಂಬೈನ ನಿವಾಸದ ಮೇಲೆ ಎನ್ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಡ್ರಗ್ಸ್ ಆನ್ ಕ್ರೂಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೀ ಎಂದು ತಿಳಿದು ಬಂದಿದೆ.