ವಿಜಯಪುರ, ಅ.21 (DaijiworldNews/HR): ರಾಜಕೀಯ ನಾಯಕರು ಆರ್ಎಸ್ಎಸ್ ಬಗ್ಗೆ ಹಗುರವಾಗಿ ಮನಬಂದಂತೆ ಮಾತನಾಡುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಆರ್ಎಸ್ಎಸ್ ಬಗ್ಗೆ ಮಾತನಾಡಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರು ಜನರ ಮುಂದೆ ಇನ್ನಷ್ಟು ಚಿಕ್ಕವರಾಗುತ್ತಾರೆ. ಇದು ಮಾಜಿ ಮುಖ್ಯಮಂತ್ರಿಗಳ ಘನತೆ, ಗೌರವಕ್ಕೆ ಇದು ಶೋಭೆ ತರುವ ವಿಚಾರವಲ್ಲ" ಎಂದಿದ್ದಾರೆ.
ಇನ್ನು "ಆರ್ಎಸ್ಎಸ್ ಬಗ್ಗೆ ಬಗ್ಗೆ ಹಗುರವಾಗಿ ಮತನಾಡಬಾರದು. ಸಂಘದ ಬಗ್ಗೆ ಟೀಕೆ ಮಾಡುವವರಿಗೆ ಗೊತ್ತಿರಲಿ, ಈ ದೇಶದ ರಾಷ್ಟ್ರಪತಿ ಕೂಡ ಸಂಘದ ಕಾರ್ಯಕರ್ತ. ದೇಶದ ಪ್ರಧಾನಿ ಕೂಡ ಆರ್ಎಸ್ಎಸ್ ಸಂಘದ ಹಿನ್ನೆಲೆಯವರೇ" ಎಂದು ಹೇಳಿದ್ದಾರೆ.