ಮುಂಬೈ, ಅ.21 (DaijiworldNews/PY): ಆರ್ಯನ್ ಖಾನ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುರುವಾರ ಬಾಲಿವುಡ್ ನಟ ಶಾರುಖ್ ಖಾನ್ ಅವರ ಮುಂಬೈಯ ಮನ್ನತ್ ನಿವಾಸಕ್ಕೆ ಮಾದಕದ್ರವ್ಯ ಬ್ಯೂರೋ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಡ್ರಗ್ಸ್ ಪ್ರಕರಣದ ಸಂಬಂಧ ಜೈಲಿನಲ್ಲಿರುವ ಪುತ್ರ ಆರ್ಯನ್ ಖಾನ್ ಅನ್ನು ಶಾರುಖ್ ಖಾನ್ ಇಂದು ಭೇಟಿಯಾದರು. ಇದಾದ ಬೆನ್ನಲ್ಲೇ ಅಧಿಕಾರಿಗಳು ಶಾರುಖ್ ಖಾನ್ ಅವರ ನಿವಾಸ ಮನ್ನತ್ಗೆ ಅಧಿಕಾರಿಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮರಳಿದ್ದಾರೆ.
ಇದೇ ವೇಳೆ ಇನ್ನೋರ್ವ ಬಾಲಿವುಡ್ ನಟ ಚಂಕಿ ಪಾಂಡೆ ಅವರ ನಿವಾಸಕ್ಕೂ ಎನ್ಸಿಬಿ ತಂಡ ತೆರಳಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಚಂಕಿ ಪಾಂಡೆ ಮಗಳು ಅನನ್ಯಾ ಪಾಂಡೆ ಅವರು ಇಂದು ಎನ್ಸಿಬಿ ವಿಚಾರಣೆಗೆ ಹಾಜರಾಗಲಿದ್ದಾರೆ.
ಮುಂಬೈಯ ವಿಶೇಷ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದ ಕಾರಣ ಆರ್ಯನ್ ಖಾನ್ ಪರ ವಕೀಲರು ಬಾಂಬೆ ಉಚ್ಚ ನ್ಯಾಯಾಲಯದ ಮೊರೆ ಹೊಗಿದ್ದಾರೆ. ಅಕ್ಟೋಬರ್ 26ರಂದು ಬಾಂಬೆ ಹೈಕೋರ್ಟ್ ಜಾಮೀನು ಅರ್ಜಿ ವಿಚಾರಣೆಗೆ ತೆಗೆದುಕೊಳ್ಳಲು ತೀರ್ಮಾನಿಸಿದ ಕಾರಣ ಆರ್ಯನ್ ಐದು ದಿನಗಳ ಕಾಲ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲೇ ಉಳಿಯಬೇಕಾಗಿದೆ.