ಬೆಂಗಳೂರು, ಅ.21 (DaijiworldNews/HR): ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲು ಅಪ್ರಬುದ್ಧ ರಾಜಕಾರಣಿ. ಅವರೊಬ್ಬ ಜೋಕರ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಳಿನ್ ಕುಮಾರ್ ಕಟೀಲು ಅಪ್ರಬುದ್ಧ ರಾಜಕಾರಣಿ ಅವರಿಗೆ ತಲೆ ಕೆಟ್ಟಿದೆ. ಹತಾಶರಾದಾಗ ಮಾತ್ರ ಅವಾಚ್ಯ ಶಬ್ದಗಳನ್ನ ಬಳಸುತ್ತಾರೆ" ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಸಚಿವ ಡಾ. ಕೆ ಸುಧಾಕರ್ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, "ಸಚಿವ ಸುಧಾಕರ್ಗೆ ಅಧಿಕಾರದ ಮದ ಹೆಚ್ಚಾಗಿ ದುರಹಂಕಾರದಲ್ಲಿ ಮಾತನಾಡುತ್ತಿದ್ದಾರೆ. ಅಧಿಕಾರವನ್ನು ಸುಧಾಕರ್ ಶಾಶ್ವತ ಅಂದುಕೊಂಡಿದ್ದಾರೆ. 2023ಕ್ಕೆ ಅವರೆಲ್ಲರೂ ಮನೆಗೆ ಹೋಗುತ್ತಾರೆ" ಎಂದು ಹೇಳಿದ್ದಾರೆ.