ಹುಬ್ಬಳ್ಳಿ, ಅ.21 (DaijiworldNews/HR): ಉಪ ಚುನಾವಣೆಯಲ್ಲಿ ವೈಯಕ್ತಿಕವಾಗಿ ನಿಂದನೆ ಸರಿಯಲ್ಲ. ನಾವು ಜರ ಮನಸ್ಸು ಗೆಲ್ಲುವ ಮಾತುಗಳನ್ನು ಆಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ಗೆ ಕಿವಿಮಾತು ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾವು ಜನರ ಸಮಸ್ಯೆ, ಕ್ಷೇತ್ರಗಳ ಅಭಿವೃದ್ಧಿ ಮಾಡುವಂತಹ ವಿಚಾರಗಳ ಕುರಿತು ಯೋಚಿಸಿ, ಬಗೆ ಹರಿಸೋ ಪ್ರಯತ್ನ ನಡೆಸಬೇಕು. ಅದನ್ನು ಬಿಟ್ಟು ವಾದಕ್ಕೆ ಬಿದ್ದವರಂತೆ ವಾದ ಮಾಡೋದು ಸರಿಯಲ್ಲ" ಎಂದರು.
ಇನ್ನು ಕೇರಳದ ಮಹಾಮಳೆ ಕುರಿತು ಪ್ರತಿಕ್ರಿಯಿಸಿದ ಅವರು, "ಈ ಬಗ್ಗೆ ಕೇರಳ ಮುಖ್ಯಮಂತ್ರಿ ಜೊತೆಗೆ ಮಾತನಾಡಿದ್ದೇನೆ. ರಾಜ್ಯ ಸರ್ಕಾರ ನಿಮ್ಮ ದುಖದಲ್ಲಿ ಭಾಗಿಯಾಗಲು ಸಿದ್ಧ ಎಂದು ತಿಳಿಸಿದ್ದೇನೆ. ರಾಜ್ಯ ಸರ್ಕಾರ ಎಲ್ಲ ನೆರವು ನೀಡುಲು ಸಿದ್ಧರಿರೋದಾಗಿ ಹೇಳಿದ್ದೇನೆ" ಎಂದು ತಿಳಿಸಿದ್ದಾರೆ.