ನವದೆಹಲಿ, ಅ. 20(DaijiworldNews/HR): ಭಾರತಕ್ಕೆ ಪ್ರಯಾಣಿಸುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಪ್ರಯಾಣಕ್ಕೆ 72 ಗಂಟೆಗಳ ಮೊದಲು ಕೊರೊನಾ ನೆಗೆಟಿವ್ ಆರ್ಟಿ- ಪಿಸಿಆರ್ ವರದಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಕಡ್ಡಾಯಗೊಳಿಸಿದೆ.
ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಸ್ವಯಂ ಘೋಷಣಾ ನಮೂನೆಯನ್ನು ಕಡ್ಡಾಯವಾಗಿ ಭರ್ತಿ ಮಾಡುವುದು ಮತ್ತು ನೆಗೆಟಿವ್ ಆರ್ಟಿ- ಪಿಸಿಆರ್ ಪರೀಕ್ಷಾ ವರದಿಯನ್ನು ಅಪ್ಲೋಡ್ ಮಾಡುವುದು ಅಗತ್ಯವಾಗಿದೆ ಎಂದು ಸರ್ಕಾರ ಹೊರಡಿಸಿದ ಹೊಸ ಮಾರ್ಗಸೂಚಿಗಳು ತಿಳಿಸಿವೆ.
ಪ್ರಯಾಣಿಕರಿಗೆ ವಿಮಾನ ಹತ್ತಲು ಅವಕಾಶ ನೀಡುವ ಮೊದಲು ನಕಾರಾತ್ಮಕ ಆರ್ಟಿ-ಪಿಸಿಆರ್ ವರದಿಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ವಿಮಾನಯಾನ ಸಂಸ್ಥೆಗಳನ್ನು ಕೇಳಿದೆ.