ಶಿವಮೊಗ್ಗ, ಅ. 20(DaijiworldNews/HR): ಬಿಜೆಪಿಯವರು ಕಾಂಗ್ರೆಸ್ ನ ರಾಷ್ಟ್ರೀಯ ನಾಯಕರಿಗೆ ಹಗುರವಾಗಿವಾಗಿ ಇದುವರೆಗೂ ಟೀಕೆ ಮಾಡಿಲ್ಲ. ಪಾಕಿಸ್ತಾನದ ವಿರುದ್ಧ ತೆಗೆದುಕೊಂಡಿದ್ದ ದಿಟ್ಟ ನಿಲುವಿಗೆ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ಹೊಗಳಿದ್ದೆವು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಬುಧವಾರ ಹೇಳಿಕೆ ನೀಡಿದ್ದಾರೆ.
ರಾಹುಲ್ ಗಾಂಧಿಯವರ ಬಗ್ಗೆ ನಳಿನ್ ಕುಮಾರ್ ಕಟೀಲ್ ಅವರು ನೀಡಿದ ಹೇಳಿಕೆ ನೀಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆಗಿನ ವಿಪಕ್ಷ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು, ಇಂದಿರಾಗಾಂಧಿಯವರನ್ನು ದುರ್ಗೆ ಎಂದು ಹೊಗಳಿದ್ದರು. ಆದರೆ ವಿಶ್ವವೇ ಮೆಚ್ಚಿರುವ ನಾಯಕ, ಪ್ರಧಾನಿ ನರೇಂದ್ರ ಮೋದಿಯವರಿಗೆ ಹೆಬ್ಬೆಟ್ ಗಿರಾಕಿ ಎಂದು ಕಾಂಗ್ರೆಸ್ ನವರು ಟೀಕೆ ಮಾಡಿದ್ದಾರೆ. ಕಾಂಗ್ರೆಸ್ ನವರು ಸೊಕ್ಕಿನಿಂದ ಮಾತನಾಡುತ್ತಾರಲ್ಲಾ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಪ್ರಧಾನಿ ಮೋದಿಗೆ ಟೀಕೆ ಮಾಡಿದ್ದು ಇಡೀ ದೇಶದ, ಪ್ರಪಂಚದ ಜನರಿಗೆ ಇಂತಹ ಹೇಳಿಕೆ ನೋವಾಗಿದೆ. ರಾಹುಲ್ ಗಾಂಧಿ ಬಗ್ಗೆ ಡ್ರಗ್ಸ್ ಪೆಡ್ಲರ್ ಎಂದು ಹೇಳಿದ ಕೂಡಲೇ, ಕಾಂಗ್ರೆಸ್ ನವರ ಹೇಳಿಕೆಗಳು ಬರತೊಡಗಿವೆ" ಎಂದು ಹೇಳಿದ್ದಾರೆ.