ಬೆಂಗಳೂರು, ಅ.20 (DaijiworldNews/PY): "ಉತ್ತಮ ಆಡಳಿತ ನೀಡಲಾಗದೆ ಭ್ರಷ್ಟಚಾರದಲ್ಲಿ ಮುಳುಗೇಳುತ್ತಿರುವ ಬಿಜೆಪಿ, ಹಿಂಸೆ ಹಾಗೂ ಕೋಮುದ್ವೇಷವನ್ನೇ ಮೂಲ ಮಂತ್ರವಾಗಿಸಿಕೊಂಡಿದೆ" ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಸಿಎಂ ಬಸವರಾಜ ಬೊಮ್ಮಾಯಿ ಅವರ 'ಆಕ್ಷನ್ - ರಿಯಾಕ್ಷನ್' ಹೇಳಿಕೆ ಬೆನ್ನಲ್ಲೇ ರಾಜ್ಯದಲ್ಲಿ ನೈತಿಕ ಪೊಲೀಸ್ ಗಿರಿ ಗರಿಗೆದರಿದೆ. ಉತ್ತಮ ಆಡಳಿತ ನೀಡಲಾಗದೆ ಭ್ರಷ್ಟಚಾರದಲ್ಲಿ ಮುಳುಗೇಳುತ್ತಿರುವ ಬಿಜೆಪಿ, ಹಿಂಸೆ ಹಾಗೂ ಕೋಮುದ್ವೇಷವನ್ನೇ ಮೂಲ ಮಂತ್ರವಾಗಿಸಿಕೊಂಡಿದೆ ಎಂದು ಹೇಳಿದೆ.
"ರಾಜ್ಯದಲ್ಲಿ ಶಾಂತಿ ಕದಡುವ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಯ ಬೆನ್ನಲ್ಲೇ ಸಮಾಜದಲ್ಲಿ ಆಕ್ಷನ್ ಹಾಗೂ ರಿಯಾಕ್ಷನ್ ಪ್ರಕರಣಗಳು ಹೆಚ್ಚುತ್ತಿವೆ. ಬೆಲೆ ಏರಿಕೆಯಿಂದ ಜನ ಶಾಪ ಹಾಕುತ್ತಿದ್ದರೆ, ಬಿಜೆಪಿ ಮುಂದಿನ ಚುನಾವಣೆಗೆ ಬೇಕಾದ ಹಿಂಸೆಯ ವಾತಾವರಣ ನಿರ್ಮಿಸಲು ದ್ವೇಷದ ಬೀಜ ಬಿತ್ತಿ ನೀರೆರೆಯುತ್ತಿದೆ. ರಾಜ್ಯದ ಜನತೆ ಈ ಮಾಯಾಬಲೆಯ ಬಗ್ಗೆ ಎಚ್ಚರವಹಿಸಬೇಕಿದೆ" ಎಂದಿದೆ.