ಶಿವಮೊಗ್ಗ, ಅ. 20(DaijiworldNews/HR): ರಾಜಕಾರಣಿಗಳಷ್ಟು ನಿರ್ಲಜ್ಜ, ನೀಚರು ಯಾರೂ ಇಲ್ಲ. ಹಾಗಾಗಿ ರಾಜಕಾರಣಿಗಳ ಬದಲಾಗಿ ಹಿಂದೂ ಸಂಘಟನೆಗಳಿಗೆ ಬಲ ತುಂಬಿ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು,"ನಮಗೆ ಬಲ ತುಂಬಿ, ನಿಮ್ಮ ದೇವಸ್ಥಾನ ಉಳಿಸುತ್ತೆವೆ. ನಿಮ್ಮ ಅಕ್ಕ-ತಂಗಿಯರನ್ನು ಉಳಿಸುತ್ತೆವೆ. ನಿಮ್ಮ ಹಸುವಿನ ಒಂದೇ ಒಂದು ಹನಿ ರಕ್ತ ಕೆಳಕ್ಕೆ ಬೀಳಲು ಬಿಡುವುದಿಲ್ಲ.ರಾಜಕಾರಣಿಗಳಿಗೆ ಬಲ ತುಂಬಬೇಡಿ. ಅವರಷ್ಟು ನಿರ್ಲಜ್ಜ, ನೀಚರು ಯಾರು ಇಲ್ಲ" ಎಂದಿದ್ದಾರೆ.
ಇನ್ನು "ರಾಜಕಾರಣಿಗಳು ಯಾವುದೇ ಪಕ್ಷದವರಾಗಿರಲಿ ಅವರಿಗೆ ಧಿಕ್ಕಾರವಿರಲಿ. ನಿಮಗೆ ನಾಚಿಕೆ, ಮಾನ, ಮರ್ಯಾದೆ ಇದೆಯಾ? ಹಿಂದುತ್ವದ ಮುಖವಾಡ ಹಾಕಿಕೊಂಡು ದೇಶದಲ್ಲಾಗುತ್ತಿರುವ ಅನಾಹುತಗಳಿಗೆ ಏನು ಹೇಳುತ್ತೀರಿ" ಎಂದು ಪ್ರಶ್ನಿಸಿದ್ದಾರೆ.