ಬೆಂಗಳೂರು, ಅ. 20(DaijiworldNews/HR): ಕಾಂಗ್ರೆಸ್ಸಿಗರೇ, ಬಿಜೆಪಿ ಎಂದಿದ್ದರೂ ಜೇನುಗೂಡಿನಂತೆ ಕೂಡು ಕುಟುಂಬ. ಹಿರಿಯ ನಾಯಕರಾದ ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಸೈಡ್ ಲೈನ್ ಮಾಡಲಾಗಿದೆ ಎಂದು ಸುಳ್ಳು ಪ್ರಚಾರ ಮಾಡುವುದಕ್ಕೆ ಮುನ್ನ ಪಂಜಾಬಿನಲ್ಲಿ ಏನಾಯ್ತು ಎಂದು ಸ್ವಲ್ಪ ನೆನಪಿಸಿಕೊಳ್ಳಿ" ಎಂದು ಬಿಜೆಪಿ ಹೇಳಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, "ಅಚ್ಛೇ ದಿನ ಬೇಡ, ಕೆಟ್ಟದಿನವೇ ಬರಲಿ ಎನ್ನುವಂತ ಸುರ್ಜೇವಾಲ ಅವರೇ, ನೀವು ಭಾರತವನ್ನು ಮಧ್ಯಯುಗಕ್ಕೆ ಕರೆದೊಯ್ಯಲು ಬಯಸುತ್ತೀರಾ.? ದುರಾಕ್ರಮಿಗಳ ದಾಸ್ಯಕ್ಕೆ ಭಾರತವನ್ನು ತಳ್ಳುವುದಕ್ಕೆ ಇಚ್ಚಿಸುತ್ತೀರಾ.? ಅಧಿಕಾರ ವಂಚಿತರಾದ ನಿಮಗೆ ಮಾತ್ರ ಅಚ್ಛೇ ದಿನದ ಅರಿವಾಗಿಲ್ಲವಷ್ಟೇ" ಎಂದು ಹೇಳಿದೆ.
ಇನ್ನು ಸುರ್ಜೇವಾಲಾ ಅವರೇ, ಸೋನಿಯಾ ಗಾಂಧಿಯವರಿಗೆ ಕಾಂಗ್ರೆಸ್ ಕಾರ್ಯಕರ್ತರು ಪತ್ರ ಬರೆಯುವುದು ತಪ್ಪಲ್ಲ. ಆದರೆ ನೀವು ಅವರನ್ನು ಉಚ್ಚಾಟಿಸಬಾರದಷ್ಟೇ. ಏಕೆಂದರೆ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೌರವವೇ ಇಲ್ಲವಲ್ಲ" ಎಂದಿದೆ.