ದಾವಣಗೆರೆ, ಅ.20 (DaijiworldNews/PY): "ನನ್ನ ಹಾಗೂ ಆರೋಗ್ಯ ಸಚಿವ ಸುಧಾಕರ್ ಅವರು ನಡುವೆ ಯಾವುದೇ ರೀತಿಯಾದ ಭಿನ್ನಾಭಿಪ್ರಾಯ ಇಲ್ಲ" ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸುಧಾಕರ್ ಅವರು ಕೊರೊನಾ ವೇಳೆ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಹಾಗಾಗಿ ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ" ಎಂದಿದ್ದಾರೆ.
"ಯಾರೂ ಕೂಡಾ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಸೈಡ್ಲೈನ್ ಮಾಡಿಲ್ಲ. ಅಲ್ಲದೇ ಮಾಡುವ ಪ್ರಶ್ನೆಯೂ ಇಲ್ಲ. ಉಪಚುನಾವಣೆಯಲ್ಲಿ ಬಿಎಸ್ವೈ ಅವರು ಪ್ರಚಾರಕ್ಕೆ ಬರುತ್ತಾರೆ" ಎಂದು ತಿಳಿಸಿದ್ದಾರೆ.
"ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟಿಪ್ಪು ಜಯಂತಿ ಜಾರಿಗೊಳಿಸಿದ್ದು ರಾಜಕೀಯ ಪ್ರೇರಿತ ಎಂದು ಎಲ್ಲರಿಗೂ ಅರಿವಾಗಿದೆ. ಉಪಚುನಾವಣೆಯಲ್ಲಿ ವಿರೋಧಿಗಳ ಗಿಮಿಕ್ ಎಲ್ಲ ನಡೆಯುವುದಿಲ್ಲ" ಎಂದು ಹೇಳಿದ್ದಾರೆ.
"ಮುಸ್ಲಿಮರು ಜೈಶ್ರೀರಾಮ್ ಎನ್ನುವ ವಿಡಿಯೋಗಳು ನನ್ನ ಕಡೆ ಇವೆ. ಹಿಂದುತ್ವದ ಕುರಿತು ಪಾಕಿಸ್ತಾನದಲ್ಲಿ ಮಾತನಾಡಿದರೆ ಹತ್ಯೆ ಮಾಡುತ್ತಾರೆ. ಆದರೆ, ವಿಪಕ್ಷದ ನಾಯಕರು ಹಾಗೂ ಹೆಚ್ಡಿಕೆ ಹಿಂದುತ್ವದ ವಿರೋಧಿಯಾಗಿ ಅಲ್ಪಸಂಖ್ಯಾತರ ಓಲೈಸುವಂತ ಹೇಳಿಕೆ ನೀಡುತ್ತಾರೆ" ಎಂದು ಕಿಡಿಕಾರಿದ್ದಾರೆ.