ಬೆಂಗಳೂರು, ಅ.20 (DaijiworldNews/PY): "ಬೇರೆಯವರ ತಪ್ಪುಗಳ ಬಗ್ಗೆ ಸದಾ ಆಡಿಕೊಳ್ಳುವ ಹೆಚ್ ಡಿ ಕುಮಾರಸ್ವಾಮಿ ಅವರೇ, ಇದೆಲ್ಲದರ ಬಗ್ಗೆ ತುಂಬಾ ಜಾಗರೂಕರಾಗಿರಬೇಕಲ್ಲವೇ?" ಎಂದು ಬಿಜೆಪಿ ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, "ಸಿಗ್ನಲ್ ಜಂಪ್, ವಿಶ್ವಾಸ ದ್ರೋಹ ( ಬ್ರೀಚ್ ಆಫ್ ಟ್ರಸ್ಟ್ , ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಎಲ್ಲಕ್ಕಿಂತ ಮುಖ್ಯವಾಗಿ ಬೈಗಮಿ ಬೇರೆಯವರ ತಪ್ಪುಗಳ ಬಗ್ಗೆ ಸದಾ ಆಡಿಕೊಳ್ಳುವ ಹೆಚ್ ಡಿ ಕುಮಾರಸ್ವಾಮಿ ಅವರೇ, ಇದೆಲ್ಲದರ ಬಗ್ಗೆ ತುಂಬಾ ಜಾಗರೂಕರಾಗಿರಬೇಕಲ್ಲವೇ?" ಎಂದು ಕೇಳಿದೆ.
"ಮಾನ್ಯ ಹೆಚ್ ಡಿ ಕುಮಾರಸ್ವಾಮಿ ಅವರೇ, ಈ ದೇಶದಲ್ಲಿ ಪ್ರಜ್ಞಾವಂತರು, ಬುದ್ಧಿವಂತರು ಎಂದು ಭ್ರಮಿಸಿಕೊಂಡವರು ಮಾಡುವ ಕೆಲವು ಪ್ರಜ್ಞಾಪೂರ್ವಕ ತಪ್ಪುಗಳೇನು ಗೊತ್ತೇ? ಅವುಗಳ ಪಟ್ಟಿಕೊಡುತ್ತೇವೆ, ಒಮ್ಮೆ ಕಣ್ಣಾಡಿಸಿ. ಅವೆಲ್ಲವೂ ಭಾರತೀಯ ದಂಡ ಸಂಹಿತೆಯ ಪ್ರಕಾರ ಅಪರಾಧವೂ ಹೌದು" ಎಂದು ಟೀಕಿಸಿದೆ.