ಜೈಪುರ, ಅ. 20(DaijiworldNews/HR): ರಾಜಸ್ಥಾನದ ಭರತ್ಪುರದಿಂದ 16 ವರ್ಷದ ಅಪ್ರಾಪ್ತೆ ಮೇಲೆ 5 ಜನ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಸಾಂದರ್ಭಿಕ ಚಿತ್ರ
ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ರಾಜಸ್ಥಾನದ ಭರತ್ಪುರದ ಗ್ರಾಮವೊಂದರಲ್ಲಿ ಐವರು ಆರೋಪಿಗಳು ಅತ್ಯಾಚಾರ ಎಸಗಿದ್ದು, ಅಕ್ಟೋಬರ್ 17ರಂದು ತಡರಾತ್ರಿ ನಡೆದಂತ ಈ ಘಟನೆ, ತಡವಾಗಿ ಇದೀಗ ಬೆಳಕಿಗೆ ಬಂದಿದೆ ಎಂದಿದ್ದಾರೆ.
ಇನ್ನು ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿರೋದಲ್ಲದೇ, ಅಪ್ರಾಪ್ತೆಯ ತಂದೆಯ ಜಮೀನಿನ ಬೆಳೆಗೂ ಬೆಂಕಿ ಹಚ್ಚಿದ್ದಾರೆ. ಇದರಿಂದ ಜಮೀನಿನಲ್ಲಿ ಬೆಳೆದಂತ ಬೆಳೆ ಕೂಡ ನಾಶಗೊಂಡಿದೆ. ಈ ಸಂಬಂಧ ಐವರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.