ಲಕ್ನೋ, ಅ.20 (DaijiworldNews/PY): ಲಖಿಂಪುರ ಖೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಶಂಕಿತ ಆರೋಪಿಗಳ ಚಿತ್ರಗಳನ್ನು ಎಸ್ಐಟಿ ತಂಡ ಬಿಡುಗಡೆ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಎಸ್ಐಟಿ, "ಈ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡುವವರ ವಿವರಗಳನ್ನು ಬಹಿರಂಗ ಪಡಿಸುವುದಿಲ್ಲ. ಮಾಹಿತಿದಾರರಿಗೆ ಸೂಕ್ತವಾದ ಬಹುಮಾನ ನೀಡಲಾಗುವುದು" ಎಂದು ತಿಳಿಸಿದೆ.
ಅ.3ರಂದು ರೈತರ ಮೇಲೆ ಎಸ್ಯುವಿ ಕಾರು ಹರಿದು ನಾಲ್ಕು ಮಂದಿ ಸಾವನ್ನಪ್ಪಿದ್ದರು. ಇದಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಎಸ್ಐಟಿ ರೂಪಿಸಿದೆ. ಎಸ್ಐಟಿ, ಬಿಜೆಪಿ ಕಾರ್ಯಕರ್ತರನ್ನು ಥಳಿಸಿರುವ ಘಟನೆಗೆ ಸಂಬಂಧಪಟ್ಟಂತೆ ಹಲವಾರು ಚಿತ್ರಗಳನ್ನು ಬಿಡುಗಡೆ ಮಾಡಿತ್ತು. ಎಸ್ಐಟಿ ಬಿಡುಗಡೆ ಮಾಡಿರುವ ಫೋಟೋದಲ್ಲಿ ಕಾಣುವ ಶಂಕಿತರ ಗುರುತು ಪತ್ತೆ ಮಾಡುವಂತೆ ಜನರಿಗೆ ಮನವಿ ಮಾಡಿದೆ.
ಬಿಜೆಪಿ ಕಾರ್ಯಕರ್ತರನ್ನು ಥಳಿಸಿರುವ ಘಟನೆಯ ವಿಚಾರಣೆಯ ಸಂಬಂಧ ಈಗಾಗಲೇ ಎಸ್ಐಟಿ 30ಕ್ಕೂ ಅಧಿಕ ರಯತರಿಗೆ ನೋಟಿಸ್ ನೀಡಿದೆ.