ನವದೆಹಲಿ, ಅ.20 (DaijiworldNews/PY): ದೇಶದಾದ್ಯಂತ ಪೆಟ್ರೋಲ್, ಡೀಸೆಲ್ ದರ ಮತ್ತೆ ಹೆಚ್ಚಳವಾಗಿದ್ದು, ಬುಧವಾರ 35 ಪೈಸೆ ಹೆಚ್ಚಳವಾಗಿದೆ.
ಇಂಧನ ದರವನ್ನು ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಕಂಪೆನಿಗಳು ಏರಿಕೆ ಮಾಡುತ್ತಾ ಬಂದಿದ್ದು, ಮುಂಬೈಯಲ್ಲಿ ಪೆಟ್ರೋಲ್ ದರ 112.11 ರೂ. ಆಗಿದ್ದು, ಡೀಸೆಲ್ ದರ 102.82ಕ್ಕೆ ಏರಿಕೆಯಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ದರ 106.19 ರೂ. ಆಗಿದ್ದರೆ ಡೀಸೆಲ್ ಬೆಲೆ 94.92 ರೂ. ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 109.88 ರೂ. ಇದ್ದರೆ, ಪ್ರತೀ ಲೀಟರ್ ಡೀಸೆಲ್ ದರ 100.72 ರೂ.ಗೆ ಹೆಚ್ಚಳವಾಗಿದೆ.
ಇಂಧನ ದರಗಳನ್ನು ಪ್ರತಿದಿನ ದೇಶಾದ್ಯಂತ ಪರಿಷ್ಕರಿಸಲಾಗುತ್ತದೆ. ತೈಲ ಕಂಪನಿಗಳು ಬೆಳಿಗ್ಗೆ 6 ಗಂಟೆಗೆ ಪ್ರಕಟಿಸುತ್ತಿದ್ದು, ಕಚ್ಚಾ ತೈಲದ ವೆಚ್ಚ, ಸಂಸ್ಕರಣಾಗಾರಗಳ ಬಳಕೆ ಅನುಪಾತ ಹಾಗೂ ಸರ್ಕಾರವು ಇಂಧನದ ಮೇಲೆ ವಿಧಿಸಿದ ವ್ಯಾಟ್ ಹಾಗೂ ತೆರಿಗೆಗಳಿಂದಾಗಿ ಇಂಧನದ ಬೆಲೆಗಳು ಹೆಚ್ಚಳವಾಗುತ್ತಿವೆ.