ಶಿವಮೊಗ್ಗ, ಅ 19 (DaijiworldNews/MS): ಬಿಜೆಪಿ ಪಕ್ಷದಲ್ಲಿ ನನ್ನನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಪಕ್ಷವಾಗಲಿ, ಅಥವಾ ನರೇಂದ್ರ ಮೋದಿ ಸಹಿತ ಪಕ್ಷದ ವರಿಷ್ಟರಾಗಲಿ ನನ್ನನ್ನು ಸೈಡ್ ಲೈನ್ ಮಾಡುತ್ತಿಲ್ಲ. ಈ ವಿಚಾರ ಸ್ಪಷ್ಟವಾಗಿ ಹೇಳುತ್ತಿದ್ದೇನೆ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು" ಗೊಂದಲ ತರುವಂತಹ ಪ್ರಯತ್ನ ಬೇಡ, ಸಿಎಂ ಸ್ಥಾನಕ್ಕೆ ಸ್ವ ಇಚ್ಚೆಯಿಂದ ರಾಜೀನಾಮೆ ಸಲ್ಲಿಸಿದ್ದೇನೆ. ಎಲ್ಲರೂ ಒಗ್ಗಟ್ಟಾಗಿದ್ದು ಪಕ್ಷವನ್ನು ಸಂಘಟಿಸೋಣ, ಪ್ರಧಾನಿ ಮೋದಿ ಅವರ ಬೆಂಬಲಿಗರಾಗಿ ನಾವೆಲ್ಲಾ ನಿಂತುಕೊಳ್ಳುತ್ತೇವೆ ಎಂದು ಹೇಳಿದ್ದಾರೆ
ನಾವು ಎಲ್ಲರೂ ಸೇರಿ ಉಪಚುನಾವಣೆ ಎದುರಿಸುತ್ತೇವೆ. ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳಲ್ಲಿ ತಲಾ 2 ದಿನ ಪ್ರಚಾರ ಮಾಡುತ್ತೇನೆ. ಸ್ಥಳೀಯ ಶಾಸಕರ ಜೊತೆಗೆ ಸೇರಿ ಪ್ರಚಾರ ಮಾಡುವುದಾಗಿ ತಿಳಿಸಿದ್ದಾರೆ.
ಸಿದ್ದರಾಮಯ್ಯ ತುಂಬಾ ಹಗರುವಾಗಿ ಮಾತನಾಡುತ್ತಿದ್ದಾರೆ. ಇದು ವಿರೋಧ ಪಕ್ಷದ ನಾಯಕರಾಗಿ ಅವರಿಗೆ ಶೋಭೆಯಲ್ಲ. ಉಪಚುನಾವಣೆಯಲ್ಲಿ ಮತದಾರರಿಂದ ಸಿದ್ದರಾಮಯ್ಯಗೆ ತಕ್ಕ ಉತ್ತರ ಸಿಗಲಿದೆ. ವಿಪಕ್ಷ ನಾಯಕನಾಗಿ ಸಿದ್ದರಾಮಯ್ಯ ಜವಾಬ್ದಾರಿಯುತವಾಗಿ ಮಾತನಾಡಲಿ, ಅಲ್ಪಸಂಖ್ಯಾತರನ್ನು ನಾವು ಕಡೆಗಣನೆ ಮಾಡಿಲ್ಲ. ನಾವು ಕಡೆಗಣನೆ ಮಾಡಿದ ಉದಾಹರಣೆ ಇದ್ರೆ ಕೊಡಲಿ ಎಂದು ವಿಪಕ್ಷಗಳಿಗೆ ಯಡಿಯೂರಪ್ಪ ಸವಾಲ್ ಹಾಕಿದ್ದಾರೆ.