ಹಾಸನ, ಅ.19 (DaijiworldNews/HR): ಬಿಜೆಪಿ- ಕಾಂಗ್ರೆಸ್ ಎರಡೂ ಪಕ್ಷದವರು ಅಡ್ಜೆಸ್ಟ್ಮೆಂಟ್ ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ ಈ ಪಕ್ಷದಲ್ಲಿ ಯಾವೊಬ್ಬ ಹಿಂದುಳಿದ ವರ್ಗ ಮತ್ತು ಪ.ಜಾ ಮುಖಂಡರನ್ನು ಅಧ್ಯಕ್ಷರನ್ನಾಗಿ ಮಾಡಿಲ್ಲ .ಕಾಂಗ್ರೆಸ್ 60 ವರ್ಷ ಆಡಳಿತ ನಡೆಸಿದರು ಮೀಸಲಾತಿ ತರಲಿಲ್ಲ. ದೇಶದಲ್ಲಿ ಮಹಿಳೆಗೆ ಮತ್ತು ಹಿಂದುಳಿದವರಿಗೆ ಮೀಸಲಾತಿ ನೀಡಿದ್ದವರು ದೇವೇಗೌಡರು" ಎಂದರು.
ಇನ್ನು ನಾನು ಸಚಿವನಾಗಿ, ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿದ್ದೇನೆ, ಕೋಮುವಾದಿಗಳ ಜೊತೆ ಸೇರಿ ಕುಮಾರಣ್ಣ ಅವರ ಮಗನನ್ನು ಮತ್ತು ದೇವೇಗೌಡರ ಸೋಲಿಸಲು ಯಾರು ಯಾರು ಕಾರಣ ಎಂದು ಗೊತ್ತಿದೆ. ಇಂತಹ ತಂತ್ರಗಾರಿಕೆ ಕಾಂಗ್ರೆಸ್ ಮಾಡಿದೆ ದೇವೇಗೌಡರು ಎಷ್ಟೋ ಚುನಾವಣೆ ಎದುರಿಸಿದ್ದಾರೆ ಆದರೆ ಇಂತಹ ರಾಜಕಾರಣ ಸರಿಯಲ್ಲ" ಎಂದು ಹೇಳಿದ್ದಾರೆ.