ನವದೆಹಲಿ, ಅ. 18 (DaijiworldNews/SM): ಸಾವರ್ಕರ್ ಹಿಂದುತ್ವ, ವಿವೇಕಾನಂದರ ಹಿಂದುತ್ವ ಎನ್ನುವ ಭಿನ್ನತೆಗಳಿಲ್ಲ. ದೇಶದಲ್ಲಿರುವುದು ಒಂದೇ ಒಂದು ಹಿಂದುತ್ವ, ಅದೇ ಶಾಶ್ವತವಾಗಿರಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಸಾವರ್ಕರ್ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿಂದುತ್ವವನ್ನು ಮನಸ್ಸಿಗೆ ಬಂದಂತೆ ವಿಶ್ಲೇಷಿಸಲು ಸಾಧ್ಯವಿಲ್ಲ. ಸ್ವಾತಂತ್ರ್ಯ ಬಂದ ನಂತರದಿಂದಲೂ ಸಾವರ್ಕರ್ ಅವರ ಬಗ್ಗೆ ಅಪಪ್ರಚಾರ ನಡೆಸಲು ದೊಡ್ಡ ಸಂಚು ನಡೆದಿದೆ. ಸಾವರ್ಕರ್ ಮುಸ್ಲಿಂ ವಿರೋಧಿಯಲ್ಲ. ಗಾಂಧೀಜಿ ಅವರು ದೇಶಕ್ಕೆ ಅಗತ್ಯ ಎಂಬ ಹೇಳಿಕೆಯನ್ನು ಕೂಡ ಅವರು ಕೊಟ್ಟಿದ್ದರು.
ಇನ್ನು ರಸ್ತೆಗಳು, ಪುರಾತನ ಕಟ್ಟಡಗಳು, ಊರುಗಳಿಗೆ ಇರಿಸಲಾಗಿದ್ದ ಮುಸ್ಲಿಂ ಸಮುದಾಯದ ವ್ಯಕ್ತಿಗಳು, ರಾಜರ ಹೆಸರನ್ನು ವಿವಿಧ ರಾಜ್ಯಗಳಲ್ಲಿ ಬದಲಾವಣೆ ಮಾಡಲಾಗುತ್ತಿರುವ ಬಗ್ಗೆ ಸಾವರ್ಕರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಸ್ಲಿಮರಲ್ಲೂಅಪಾರ ದೇಶಭಕ್ತಿ ಇರುವವರು ಇದ್ದಾರೆ. ಅಂಥವರಿಗೆ ಗೌರವ ಸಿಗಬೇಕು ಎಂದು ಅವರು ಹೇಳಿದ್ದಾರೆ.