ನವದೆಹಲಿ, ಅ. 18 (DaijiworldNews/SM): ಕೋವಿಡ್ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ನ (ಸಿಬಿಎಸ್ಇ) 10, 12 ನೇ ತರಗತಿಯ ಟರ್ಮ್ -1 ಪರೀಕ್ಷಾ ವೇಳಾಪಟ್ಟಿ ಬಿಡುಗಡೆಗೊಳಿಸಿದೆ. 10, 12 ನೇ ತರಗತಿಯ ಟರ್ಮ್ -1 ಪರೀಕ್ಷೆಗಳು ನವಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ನಡೆಯಲಿವೆ.
ವೇಳಾಪಟ್ಟಿ ಬಿಡುಗಡೆಗೊಂಡ ಹಿನ್ನೆಲೆಯಲ್ಲಿ ಹಲವು ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಡೇಟ್ಶೀಟ್ ಬಿಡುಗಡೆ ಆಗಲಿದ್ದ ಹಿನ್ನೆಲೆ ಹಲವಾರು ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದರು. ಇದೀಗ ಅಧಿಕೃತ ವೇಳಾಪಟ್ಟಿಯು ಬಿಡುಗಡೆ ಆಗಿದೆ.
ಇದೇ ಮೊದಲ ಬಾರಿಗೆ ಸಿಬಿಎಸ್ಇ 10 ನೇ ತರಗತಿ ಮತ್ತು 12 ನೇ ತರಗತಿಯ ಪರೀಕ್ಷೆಯು ವರ್ಷದಲ್ಲಿ ಎರಡು ಬಾರಿ ನಡೆಯಲಿದೆ. 10 ನೇ ತರಗತಿ ಮತ್ತು 12 ನೇ ತರಗತಿಯ ಟರ್ಮ್ -1 ಪರೀಕ್ಷೆಯಲ್ಲಿ, 50 ಶೇಕಡಾ ಪಠ್ಯಕ್ರಮದಿಂದ ಪ್ರಶ್ನೆಗಳು ಮಾತ್ರ ಇರಲಿದೆ. ವಿದ್ಯಾರ್ಥಿಗಳು ಈ ಡೇಟ್ಶೀಟ್ ಅನ್ನು ವೆಬ್ಸೈಟ್ cbse.nic.in ಮೂಲಕ ಡೌನ್ಲೋಡ್ ಮಾಡಬಹುದಾಗಿದೆ ಎಂದು ಬೋರ್ಡ್ ತಿಳಿಸಿದೆ.
ಇನ್ನು ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ನಕಲಿ ವೇಳಾಪಟ್ಟಿ ಹರಿದಾಡುತ್ತಿದೆ. ಈ ಬಗ್ಗೆ ಈಗಾಗಲೇ ಸಿಬಿಎಸ್ಇ ಸ್ಪಷ್ಟನೆ ನೀಡಿದೆ.