ಬೆಂಗಳೂರು, ಅ.18 (DaijiworldNews/HR): ಅಕ್ಟೋಬರ್ 25ರಿಂದ 1ರಿಂದ 5ರ ತನಕ ಶಾಲೆ ಪ್ರಾರಂಭಿಸುವುದಕ್ಕೆ ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಶಾಲೆ ಆರಂಭಕ್ಕೆ ಕೊರೊನಾ ತಾಂತ್ರಿಕ ಸಮಿತಿ ಒಪ್ಪಿಗೆ ನೀಡಿ ಎಂದು ತಿಳಿದು ಬಂದಿದೆ.
ಸಾಂದರ್ಭಿಕ ಚಿತ್ರ
ರಾಜ್ಯದಲ್ಲಿ ಈಗಾಗಲೇ 6 ನೇ ತರಗತಿಯಿಂದ ಉನ್ನತ ಶಿಕ್ಷಣ ಹಂತದವರೆಗಿನ ಎಲ್ಲ ತರಗತಿಗಳ ಭೌತಿಕ ಕ್ಲಾಸ್ ಅನುಮತಿ ನೀಡಿದ್ದು, ಕೊರೊನಾ ಮೂರನೇ ಅಲೆಯ ಭಯದ ಹಿನ್ನೆಲೆಯಿಂದ 1 ರಿಂದ 5 ನೇ ತರಗತಿ ಆರಂಭವಾಗಿರಲಿಲ್ಲ, ಆದರೆ ಇದೀಗ ಕೊರೊನಾ ಪ್ರಕರಣಗಳು ಇಳಿಕೆ ಕಂಡ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಮತ್ತೆ ಶಾಲೆಗಳನ್ನು ಆರಂಭಿಸಲು ಮುಂದಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಶಾಲೆಗೆ ಮಕ್ಕಳಿಗೆ ಬರಲು ಯಾವುದೇ ಬಲವಂತ ಮಾಡುವಂತಿಲ್ಲ, ಜೊತೆಗೆ ಮಕ್ಕಳು ಶಾಲೆಗೆ ಬರಲು ಹಾಜರಾತಿ ಕಡ್ಡಾಯವಲ್ಲ. ಒಂದು ವಾರದ ಮಟ್ಟಿಗೆ ಶಾಲೆಯ ಅವಧಿಯನ್ನು ಕಡಿತ ಮಾಡಲಾಗುವುದು ಬಳಿಕ ಎಂದಿನಂತೆ ಸಮಯವನ್ನು ಮುಂದುವರೆಯಲಿದೆ" ಎಂದಿದ್ದಾರೆ.
ಇನ್ನು ಮಕ್ಕಳ ಪೋಷಕರ ಈಗಾಗಲೇ ಶಾಲೆ ಆರಂಭವಾಗಿರುವುದಕ್ಕೆ ಉತ್ತಮವಾಗಿ ಪ್ರತಿಕ್ರಿಯೆ ನೀಡುತ್ತಿದ್ದು, ಮಾರ್ಗಸೂಚಿಗಳ ಬಗ್ಗೆ ನಾಡಿದ್ದು ಎಲ್ಲಾ ಶಾಲೆಗಳಿಗೆ ಮಾಹಿತಿ ನೀಡಲಾಗುವುದು" ಎಂದು ತಿಳಿಸಿದರು.