ಮುಂಬೈ, ಅ.18 (DaijiworldNews/HR): ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ (ಎಂವಿಎ) ಸರ್ಕಾರದ ನಾಯಕರ ಕುಟುಂಬದ ಸದಸ್ಯರಿಗೆ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ನೀಡಿರುವ ಕಿರುಕುಳ ಬಿಜೆಪಿಯ ಅಮಾನವೀಯ ಮುಖವನ್ನು ತೆರೆದಿಡುತ್ತದೆ ಎಂದು ಶಿವಸೇನೆ ಹೇಳಿದೆ.
ಸಾಂದರ್ಭಿಕ ಚಿತ್ರ
ಈ ಕುರಿತು ಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬರೆದಿದ್ದು, "ಸಾಮಾನ್ಯವಾಗಿ ಜನರು ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡಿರುವುದಾಗಿ ಹೇಳುತ್ತಾರೆ. ಆದರೆ, ಮಹಾರಾಷ್ಟ್ರದಲ್ಲಿ ಇದು ತದ್ವಿರುದ್ಧವಾಗಿದ್ದು ಬಿಜೆಪಿ ಹಾಸ್ಯದ ಸರಕಾಗಿ ಮಾರ್ಪಟ್ಟಿದೆ" ಎಂದಿದೆ.
ಇನ್ನು ಬಿಜೆಪಿಯು ತನ್ನ ಸ್ವಂತ ಕಾರ್ಯಸೂಚಿಗಾಗಿಯೇ ಸಿಬಿಐ, ಜಾರಿ ನಿರ್ದೇಶನಾಲಯ, ಐಟಿ ಮತ್ತು ಎನ್ಸಿಬಿ ಬಳಸುತ್ತದೆ. ಇ.ಡಿ ಮತ್ತು ಸಿಬಿಐ ಬಳಸಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಠಾಕ್ರೆ ಬಹಿರಂಗಪಡಿಸಿದ್ದಾರೆ.