ಬೆಂಗಳೂರು, ,ಅ 18(DaijiworldNews/MS): ನಾವು ಎಲ್ಲಾ ವರ್ಗದ ಪರ ಎಂದು ಎಲ್ಲರ ಮುಂದೆ ಪರ್ಸೆಂಟೇಜ್ಗಾಗಿ "ಕೈ" ಚಾಚುವ ಭ್ರಷ್ಟರಿಂದ ಈ ದೇಶ, ರಾಜ್ಯ ಉದ್ದಾರವಾಗಲು ಸಾಧ್ಯವೇ?ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವಸಿ.ಟಿ. ರವಿ ಅವರು , " ಕೋತಿ ತಾನು ಬೆಣ್ಣೆ ತಿಂದು ಮೇಕೆ ಮೂತಿಗೆ ಹಚ್ಚಿದಂತೆ ವಿ.ಎಸ್.ಉಗ್ರಪ್ಪ ಮಾಧ್ಯಮಗಲ್ಲಿ ಬಹಿರಂಗ ಮಾಡಿದ ಆ ಪಕ್ಷದ ಅಧ್ಯಕ್ಷರ ಸತ್ಯ ವಿಶ್ವವಿಖ್ಯಾತವಾಗುತ್ತಿದ್ದಂತೆ ಬಿಜೆಪಿ ನಾಯಕರ ತಲೆಗೆ ಕಟ್ಟಲು ಮುಂದಾದರು" ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲೇ ಭ್ರಷ್ಟಾಚಾರದ ಹೆಗ್ಗಣಗಳಿಂದ ಲೂಟಿಯಾಗುತ್ತಿದ್ದರೂ ಬೇರೆಯವರ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷದ ಸಿದ್ದಾಂತಗಳಿಗೆ ಯಾವ ಬೆಲೆಯಿದೆ?ನಾವು ಎಲ್ಲಾ ವರ್ಗದ ಪರ ಎಂದು ಎಲ್ಲರ ಮುಂದೆ ಪರ್ಸೆಂಟೇಜ್ಗಾಗಿ "ಕೈ" ಚಾಚುವ ಭ್ರಷ್ಟರಿಂದ ಈ ದೇಶ, ರಾಜ್ಯ ಉದ್ದಾರವಾಗಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ಕಮಿಷನ್ ಗಿರಾಕಿಗಳ ಸತ್ಯ ಹೊರ ಬರುತ್ತಿದ್ದಂತೆ ಬಿಜೆಪಿ ವಿರುದ್ಧ ಟ್ಟೀಟ್ ಮಾಡಿ ವಿಷಯಾಂತರ ಮಾಡುತ್ತಿರುವುದು ನಾಚಿಕೆಗೇಡು. ನನ್ನ ಆಸ್ತಿ ಎಷ್ಟಿತ್ತೋ ಅಷ್ಟೇ ಇದೆ. ಲೋಕಾಯುಕ್ತಕ್ಕೆ ದೂರು ಕೊಟ್ಟವರಿಗೆ ಅದರ ದಾಖಲೆ ಸಿಕ್ಕಿರಬಹುದು. 800 ಪಟ್ಟಿನಷ್ಟು ಆಸ್ತಿ ಏರಿಕೆ ಆದದ್ದು ಯಾರದ್ದು? ಕಾಂಗ್ರೆಸ್ ನವರಿಗೆ ಗೊತ್ತಿರಬಹುದ್ದಲ್ಲವೆ? "ತಾನು ಕಳ್ಳ ಪರರ ನಂಬ ಕಳ್ಳ ಕಾಂಗ್ರೆಸ್" ! ಎಂದು ಲೇವಡಿ ಮಾಡಿದ್ದಾರೆ.