ಹೈದರಾಬಾದ್, ಅ.18 (DaijiworldNews/HR): ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಡಿಜೆಗಾಗಿ 6 ವರ್ಷದ ಬಾಲಕ ಪೊಲೀಸ್ ನೊಂದಿಗೆ ನಡೆಸಿದ ಮಾತುಕತೆಯ ವಿಡಿಯೋ ಒಂದು ವೈರಲ್ ಆಗಿದ್ದು, ಈ ವಿಡಿಯೋ ನೋಡಿದವರೆಲ್ಲರೂ ಹುಡುಗನ ಧೈರ್ಯಕ್ಕೆ ಭೇಷ್ ಅಂದಿದ್ದಾರೆ.
ದುರ್ಗಾ ಮಾತೆಯ ವಿಗ್ರಹವನ್ನು ಸದಾಶಿವಪೇಟೆ ನಗರದಲ್ಲಿ ಮುಳುಗಿಸಲಾಗಿದ್ದು, ಈ ಸಮಯದಲ್ಲಿ ದುರ್ಗಾ ಮಾತೆಯ ಟ್ಯಾಬ್ಲೋ ತೆಗೆದುಕೊಂಡು ಹೋಗುವಾಗ ಸ್ಥಳೀಯ ಪೊಲೀಸರು ಡಿಜೆಗೆ ಅನುಮತಿ ನೀಡಲಿಲ್ಲ. ಇದಕ್ಕೆ 6 ವರ್ಷದ ಹುಡುಗ ಡಿಜೆ ಅನುಮತಿಯ ಬಗ್ಗೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೊಂದಿಗೆ ವಾದಿಸಿ ಅವಕಾಶ ನೀಡದಿರುವುದಕ್ಕೆ ಕಾರಣವನ್ನು ಕೇಳುತ್ತಿದ್ದರು. ಬಾಲಕನ ವಾದದಿಂದ ಪೊಲೀಸರಿಗೂ ಆಶ್ಚರ್ಯವಾಗಿದ್ದು, ಜನರು ಮಗುವಿನ ಮಾತನ್ನು ಕೇಳಿ ಆನಂದಿಸುತ್ತಿದ್ದರು.
ಇನ್ನು ಡಿಜೆ ಅನುಮತಿ ಬಗ್ಗೆ ಬಾಲಕ ಪೊಲೀಸ್ ಜೊತೆ ಮಾತನಾಡುತ್ತಿರುವ ರೀತಿ ಯನ್ನು ನೋಡಿ ಪೊಲೀಸರಿಗೂ ಆಶ್ಚರ್ಯವಾದ್ದು, ಸದ್ಯ ಈ ವಿಡಿಯೋ ವೈರಲ್ ಆಗಿದೆ.