ಬೆಂಗಳೂರು ಅ 18(DaijiworldNews/MS): 'ಮೊದಲ ಬೇಟೆ ನೀನೇ' ಎಂದು ಟ್ವಿಟರ್ ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಸಿದ್ದರಾಮಯ್ಯ ಅವರು ತ್ರಿಶೂಲ ಹಾಗೂ ವಿಜಯಪುರ ಹಾಗೂ ಕಾಪು ಪೋಲಿಸರು ಧರಿಸಿದ್ದ ಕೇಸರಿ ವಸ್ತ್ರಕ್ಕೆ ಸಂಬಂಧಪಟ್ಟಂತೆ ಟ್ವಿಟ್ ಮಾಡಿ ಗಮನ ಸೆಳದಿದ್ದು, ಇದೇ ವೇಳೆ ಹಲವು ಮಂದಿ ಈ ಬಗ್ಗೆ ನಾನಾ ರೀತಿಯಲ್ಲಿ ಚರ್ಚೆ ನಡೆಸಿದ್ದರು.
ಈಗ ಟ್ವಿಟರ್ನಲ್ಲಿ ಪ್ರಕಾಶ್ ಎಂಬ ಖಾತೆ ಹೊಂದಿದ ಬಳಕೆದಾರೊಬ್ಬರು ಸಿದ್ದರಾಮಯ್ಯ ಅವರ ಟ್ವಿಟ್ ಅನ್ನು ರೀಟ್ವಿಟ್ ಮಾಡಿ ನಮ್ಮ ಕರ್ನಾಟಕ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಯಾರ ಕೈಗೆ ಏನು ಕೊಡಬೇಕೆಂದು ಚೆನ್ನಾಗಿ ಗೊತ್ತು! ತ್ರಿಶೂಲ ಕೊಟ್ರೆ ಮೊದಲ ಬೇಟೆ ನೀನೇ ಅಂತ ಕೊಲೆ ಬೆದರಿಕೆ ಹಾಕಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂಕೂಡ ವಿರೋಧ ವ್ಯಕ್ತವಾಗುತ್ತಿದ್ದು, ಮಾಜಿ ಸಿಎಂಗೆ ಈ ಬಹಿರಂಗವಾಗಿಯೇ ರೀತಿ ಕೊಲೆ ಬೆದರಿಕೆ ಹಾಕಿದರೆ, ಉಳಿದವರ ಗತಿ ಏನು ಎಂದು ಪ್ರಶ್ನೆ ಮಾಡುತ್ತಿದ್ದಾರೆ.