ಬೆಂಗಳೂರು, ಅ.18 (DaijiworldNews/HR): ವಾಸ್ತವಗಳ ಬಗ್ಗೆ ಮಾತನಾಡದ ಪ್ರಧಾನಿ ತಮ್ಮ ಹೆಸರನ್ನು 'ಮೌನೇಂದ್ರ ಮೋದಿ' ಎಂದು ಬದಲಿಸಿಕೊಳ್ಳಲಿ ಎಂದು ಕಾಂಗ್ರೆಸ್ ಹೇಳಿದೆ.
ಸಾಂದರ್ಭಿಕ ಚಿತ್ರ
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಬೆಲೆ ಏರಿಕೆ, ಕಾಶ್ಮೀರದ ದಳ್ಳುರಿ, ಚೀನಾ ಅತಿಕ್ರಮಣ, ಅದಾನಿ ಡ್ರಗ್ಸ್ ದಂಧೆ, ನಿರುದ್ಯೋಗ ಸೇರಿದಂತೆ ಎಲ್ಲ ವಿಷಯದಲ್ಲೂ ಪ್ರಧಾನಿ ಮೌನ ವಹಿಸಿದ್ದು, ಅವರು ತಮ್ಮ ಹೆಸರನ್ನು 'ಮೌನೇಂದ್ರ ಮೋದಿ' ಎಂದು ಬದಲಿಸಿಕೊಳ್ಳಲಿ" ಎಂದಿದೆ.
ಇನ್ನು ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಇಂದು ಪೆಟ್ರೋಲ್ 66, ಡೀಸೆಲ್ 55 ರೂಪಾಯಿಗೆ ದೊರಕುತ್ತಿತ್ತು. ಜನರನ್ನು ದೋಚಿ, ಉದ್ಯಮಿಗಳ ಹೊಟ್ಟೆ ತುಂಬಿಸುವ ಯೋಜನೆ ಹೊಂದಿರುವ ಕೇಂದ್ರ ಬಿಜೆಪಿ ಸರ್ಕಾರದ ತೆರಿಗೆ ಭಯೋತ್ಪಾದನೆಯಿಂದ ಎಲ್ಲಾ ಅಗತ್ಯ ವಸ್ತುಗಳು ದುಬಾರಿಯಾಗಿವೆ" ಎಂದಿದೆ.