ಬೆಂಗಳೂರು, ಅ 18(DaijiworldNews/MS): " ಹಳ್ಳದ ಕಡೆಗೆ ಹೇಗೆ ನೀರು ಹರಿಯುವುದು, ಹಾಗೆಯೇ ಕಾಂಗ್ರೆಸ್ ಬಳಿಗೆ ಭ್ರಷ್ಟರು ಬರುವುದು ಎಂದು ಬಿಜೆಪಿ ಪಕ್ಷ ವ್ಯಂಗ್ಯವಾಡಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಪ್ರಭಾವಿ ರಾಜಕಾರಣಿಗಳ ಪ್ರಚಾರದ ಹೊಣೆ ಹೊತ್ತಿರುವ ಹಾಗೂ ಸಾಮಾಜಿಕ ಜಾಲತಾಣಗಳನ್ನುನಿರ್ವಹಿಸುತ್ತಿರುವ ಡಿಸೈನ್ ಬಾಕ್ಸ್ ಕಂಪನಿಯ ಕಚೇರಿಗಳ ಮೇಲೆ ತೆರಿಗೆ ವಂಚನೆ ಆರೋಪದ ಮೇರೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಈ ಸಂಸ್ಥೆ ಹವಾಲಾ ಅಪರೇಟರ್ ಗಳ ಮೂಲಕ ಹಣ ವರ್ಗಾವಣೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು.
ಈ ವಿಚಾರವಾಗಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕವು," ಏನು ಮಾಯವೋ..!ಹಳ್ಳದ ಕಡೆಗೆ ನೀರು ಹರಿಯುವುದು, ಕಾಂಗ್ರೆಸ್ ಬಳಿಗೆ ಭ್ರಷ್ಟರು ಬರುವುದು.ಡಿಕೆಶಿ ಎಲ್ಲಿರುತ್ತಾರೋ ಅಲ್ಲಿ ಅಕ್ರಮ ವಹಿವಾಟು ಇದ್ದೇ ಇರುತ್ತದೆ. ಬೇರೆ ಬೇರೆ ರಾಜ್ಯಗಳಲ್ಲಿ ನಡೆದ ಈ ವ್ಯವಹಾರದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಪಾಲೆಷ್ಟು? "ಎಂದು ಪ್ರಶ್ನಿಸಿದೆ