ಬೆಂಗಳೂರು, ಅ.18 (DaijiworldNews/HR): ಮಾಜಿ ಕಾಂಗ್ರೆಸ್ ಸಂಸದ ವಿ.ಎಸ್.ಉಗ್ರಪ್ಪ ಹಾಗೂ ಸಲೀಂ ಅವರು ಸುದ್ದಿಗೋಷ್ಠಿ ವೇಳೆ ಡಿ.ಕೆ ಶಿವಕುಮಾರ್ ಅವರ ಬಗ್ಗೆ ಮಾತನಾಡಿದ್ದ ಮಾತಿಗೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಆಲಂ ಪಾಷಾ ಅವರು ಎಸಿಬಿಗೆ ದೂರು ಸಲ್ಲಿಸಿದ್ದಾರೆ.
ಆಲಂ ಪಾಷಾ ಅವರು ಮಾಜಿ ಕಾಂಗ್ರೆಸ್ ಸಂಸದ ವಿ.ಎಸ್.ಉಗ್ರಪ್ಪ ಮತ್ತು ಸಲೀಂ ಅವರು ಮಾತನಾಡಿರುವ ವಿಡಿಯೋ/ಆಡಿಯೋ ತುಣಕನ್ನು ಕೂಡ ನೀಡಿದ್ದು, ಇದೊಂದು ಗಂಭೀರವಾದ ವಿಷಯವಾಗಿದ್ದು, ಈ ಬಗ್ಗೆ ಸೂಕ್ತವಾದ ಕ್ರಮವನ್ನು ಕೈಗೊಳ್ಳುವಂತೆ ಎಸಿಬಿಗೆ ಮನವಿ ಮಾಡಿದ್ದಾರೆ. ಇದೇ ವೇಳೆ ದೂರು ಸ್ವೀಕರಿಸಿರುವ ಎಸಿಬಿ ಮುಂದಿನ ಕ್ರಮದ ಬಗ್ಗೆ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಿದೆ ಎನ್ನಲಾಗಿದೆ.
ಇನ್ನು ವಿ.ಎಸ್. ಉಗ್ರಪ್ಪ ಮತ್ತು ಸಲೀಂ ಸುದ್ದಿಗೋಷ್ಟಿ ಆರಂಭಕ್ಕೂ ಮುನ್ನ ಮಾತನಾಡುತ್ತಾ ಡಿ. ಕೆ. ಶಿವಕುಮಾರ್ ಒಬ್ಬ ದೊಡ್ಡ ಕಮಿಷನ್ ಗಿರಾಕಿ, 12% ಕಮಿಷನ್ ಹೊಡೆಯುತ್ತಿದ್ದ. ಡಿ ಕೆ ಹುಡುಗರ ಹತ್ತಿರ 50-100 ಕೋಟಿ ಇದೆ ಅಂಥ ಹೇಳಿದ್ದರು.