ಹುಬ್ಬಳ್ಳಿ, ಅ 18(DaijiworldNews/MS): ಸದ್ಯಕ್ಕೆ ತೈಲ ದರ ಏರಿಕೆ ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಈ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಜನತೆಗೆ ಕೊಂಚ ಸಮಧಾನಕರ ಸುದ್ದಿ ನೀಡಿದ್ದಾರೆ.
ಉಪ ಚುನಾವಣೆಯ ಬಳಿಕ ತೈಲದ ಮೇಲಿನ ತೆರಿಗೆ ಇಳಿಸುವ ಕುರಿತು ನಿರ್ಧರಿಸುವುದಾಗಿ ತಿಳಿಸಿದ್ದಾರೆ. ನಮ್ಮ ರಾಜ್ಯದ ಆರ್ಥಿಕತೆಯ ಮೇಲೆ ತೈಲ ಬೆಲೆ ಅವಲಂಬಿತವಾಗಿದೆ. ಕರ ಇಳಿಸುವ ಬಗ್ಗೆ ಉಪ ಚುನಾವಣೆಯ ಬಳಿಕ ಪುನರವಲೋಕನ ಮಾಡುತ್ತೇನೆ. ಆರ್ಥಿಕತೆ ಸುಧಾರಣೆಯಾದರೆ ಮಾತ್ರ ತೈಲದ ಮೇಲಿನ ಕರ ಕಡಿಮೆ ಮಾಡಲು ಸಾಧ್ಯ. ಅದರೂ ಜನರ ಕಷ್ಟಗಳಿಗೆ ಸ್ಪಂದಿಸುತ್ತೇನೆ ಎಂದು ಮಾಧ್ಯಮಗಳಿಗೆ ತಿಳಿಸಿದರು.
ಹಾನಗಲ್-ಸಿಂದಗಿ ಕ್ಷೇತ್ರಗಳಲ್ಲಿ ಹೆಚ್ಚಿನ ಸಮಯ ಮೀಸಲಿರಿಸಿ ಪ್ರಚಾರ ಮಾಡುತ್ತಿದ್ದೇನೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅತೀ ಹೆಚ್ಚು ಮತಗಳಿಂದ ಆಯ್ಕೆ ಆಗುತ್ತಾರೆ. ಹಾನಗಲ್ ಅಳಿಯ ಬೊಮ್ಮಾಯಿ ಇಲ್ಲಿಗೆ ಏನು ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಅವರಿಗೆ ನಾನು ಅಲ್ಲಿಗೆ ಹೋಗಿಯೇ ಉತ್ತರ ನೀಡುತ್ತೇನೆ ಎಂದರು.