ಕೊಟ್ಟಾಯಂ, ಅ. 17 (DaijiworldNews/SM): ಕೇರಳದಲ್ಲಿ ಧಾರಾಕಾರ ಮಳೆ ಸಂಭವಿಸಿದ ಪರಿಣಾಮ ಭೂಕುಸಿತ ಹಾಗೂ ಪ್ರವಾಹ ಉಂಟಾಗಿದೆ. ಇದರಿಂದಾಗಿ ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ರವಿವಾರ ಮಧ್ಯಾಹ್ನ ಕೊಟ್ಟಾಯಂನಲ್ಲಿ 12, ಇಡುಕಿಯಲ್ಲಿ 6 ಹಾಗೂ ಕೊಝಿಕೋಡ್ ನಲ್ಲಿ ಒಬ್ಬರು ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ.
ಕೊಟ್ಟಾಯಂನ ಕೊಟ್ಟಕ್ಕಲ್ ಪಂಚಾಯತ್ ನಲ್ಲಿ ಭೂ ಕುಸಿತದಿಂದ ನಾಪತ್ತೆಯಾಗಿದ್ದ ಎಲ್ಲಾ 11 ಜನರು ಮೃತದೇಹ ಪತ್ತೆಯಾಗಿದೆ. ಕೊಟ್ಟಾಯಂ ಜಿಲ್ಲೆಯ ಪಶ್ಚಿಮ ಘಟ್ಟ ಹಾಗೂ ಇಡುಕ್ಕಿ ಜಿಲ್ಲೆಯ ಪೂರ್ವ ಭಾಗದಲ್ಲಿ ಸರಣಿ ಭೂ ಕುಸಿತ ಸಂಭವಿಸುತ್ತಿದೆ.
ಈ ಹಿಂದೆ ಇಡುಕಿಯ ಕೊಕ್ಕಾಯಾರ್ ನಲ್ಲಿ ಸಂಭಿವಿಸದ ಭೂ ಕುಸಿತದಿಂದ ಹಲವರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿತ್ತು. ಧಾರಾಕಾರ ಮಳೆಯಿಂದಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ನೇತೃತ್ವದ ರಕ್ಷಣಾ ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದೆ.