ದಾವಣಗೆರೆ, ಅ.17 (DaijiworldNews/HR): ಆರ್ಎಸ್ಎಸ್ ಬಗ್ಗೆ ಮಾತನಾಡುವವರು ಸರ್ವನಾಶ ಆಗ್ತಾರೆ. ಆರ್ಎಸ್ಎಸ್ ಇರೋದು ಹಿಂದುತ್ವ, ಸಂಸ್ಕೃತಿಯನ್ನು ಉಳಿಸೋದಕ್ಕೆ ಆಗಿದೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಕುಮಾರಸ್ವಾಮಿ ಅರೆ ಹುಚ್ಚ ಆಗಿಬಿಟ್ಟಿದ್ದಾರೆ ಏನೂ ಮಾಡೋದಕ್ಕೆ ಆಗೋದಿಲ್ಲ. ಆರ್ಎಸ್ಎಸ್ ಬಗ್ಗೆ ಮಾತನಾಡಿದ್ರೇ ನೀವೆ ಸರ್ವನಾಶ ಆಗ್ತೀರಿ" ಎಂದರು.
ಇನ್ನು ಸಂಘ ಪರಿಹಾರದ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡುತ್ತೇವೆ. ನಮಗೆ ಆರ್ಎಸ್ಎಸ್ ಮಾರ್ಗದರ್ಶವಾಗಿದೆ. ಇಂತಹ ಆರ್ಎಸ್ಎಸ್ ಬಗ್ಗೆ ಮಾತನಾಡೋರು ಅವರೇ ಸರ್ವನಾಶ ಆಗಿ ಹೋಗಲಿದ್ದಾರೆ" ಎಂದು ಹೇಳಿದ್ದಾರೆ.