ಬೆಂಗಳೂರು, ಅ.17 (DaijiworldNews/PY): "ನಳಿನ್ ಕುಮಾರ್ ಕಟೀಲ್ ಪಕ್ಷದ ಕಚೇರಿಗೆ ಭೇಟಿ ಕೊಡುವುದಕ್ಕಿಂತ ಮಂಗಳೂರಿನ ಗೆಳತಿಯರ ಹಿಂದೆ ಅಲೆಯುವುದೇ ಹೆಚ್ಚು ಎಂದು ಆ ಭಾಗದ ಗುಸುಗುಸು, ನಿಜವೇ ಬಿಜೆಪಿ?" ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ತಮ್ಮದೇ ಪಕ್ಷದ ಬಿ ಎಸ್ ಯಡಿಯೂರಪ್ಪ ಅವರನ್ನು ಮತ್ತೊಮ್ಮೆ ಜೈಲಿಗೆ ಕಳಿಸಲು ಐಟಿ ಬಲೆ ಹೆಣೆದಿರುವ ಬಿಜೆಪಿ ವಿಪಕ್ಷದವರನ್ನು ಸಿಲುಕಿಸಲು ಯತ್ನಿಸುವುದು ವಿಶೇಷವೇನಲ್ಲ ಬಿಡಿ. ನಳಿನ್ ಕುಮಾರ್ ಕಟೀಲ್ ಪಕ್ಷದ ಕಚೇರಿಗೆ ಭೇಟಿ ಕೊಡುವುದಕ್ಕಿಂತ ಮಂಗಳೂರಿನ ಗೆಳತಿಯರ ಹಿಂದೆ ಅಲೆಯುವುದೇ ಹೆಚ್ಚು ಎಂದು ಆ ಬಾಗದ ಗುಸುಗುಸು, ನಿಜವೇ ಬಿಜೆಪಿ?" ಎಂದು ಕೇಳಿದೆ.
ಭ್ರಷ್ಟಾಚಾರದ ಯೂನಿವರ್ಸಿಟಿಯಾದ ಬಿಜೆಪಿ ಪಕ್ಷದ ಆಡಳಿತದಲ್ಲಿ ಜೈಲಿಗೆ ಹೋಗಲು ನೂಕುನುಗ್ಗಲು ಏರ್ಪಟ್ಟಿದ್ದನ್ನು ರಾಜ್ಯ ಕಂಡಿದೆ! ಜೈಲಿಗೆ ಹೋಗಿ ಗಡಿಪಾರಾದವನನ್ನು ಗೃಹಮಂತ್ರಿ, ಮತ್ತೊಬ್ಬರನ್ನು ಮುಖ್ಯಮಂತ್ರಿ ಮಾಡಿದ ಕರಾಳ ಇತಿಹಾಸ ಹೊಂದಿದ ಬಿಜೆಪಿಯಲ್ಲಿ ತುಂಬಿರುವುದು ಬರೀ 'ನುಂಗಣ್ಣರೇ' ಎಂದಿದೆ.