ನವದೆಹಲಿ, ಅ.17 (DaijiworldNews/PY): ವಾಯುಪಡೆ ಮುಖ್ಯಸ್ಥ ವಿ.ಆರ್.ಚೌಧರಿ ಅವರು ಭಾರತೀಯ ವಾಯುಪಡೆಯ ಜಮ್ಮು-ಕಾಶ್ಮೀರದ ಲೇಹ್ನಲ್ಲಿರುವ ಕೇಂದ್ರಕ್ಕೆ ಭೇಟಿ ನೀಡಿದ್ದು, ಸೇವಾ ಘಟಕದ ಕಾರ್ಯನಿರ್ವಹಣೆ, ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.
ಈ ವೇಳೆ ವಿ.ಆರ್.ಚೌಧರಿ ಅವರು ಘಟಕದ ಸಿಬ್ಬಂದಿಗಳೊಂದಿಗೆ ಚರ್ಚೆ ನಡೆಸಿ, ಅಭಿಪ್ರಾಯ ಪಡೆದುಕೊಂಡರು ಎಂದು ವಾಯುಪಡೆ ಟ್ವೀಟ್ ಮಾಡಿದೆ.
ಗಡಿ ಭಾಗದಲ್ಲಿ ಭಾರತ ಹಾಗೂ ಚೀನಾ ಸೇನೆಯ ಮಧ್ಯೆ ಮೇ 5ರ ಹಿಂಸಾಚಾರದ ಬಳಿಕ ಪ್ರಾರಂಭವಾಗಿರುವ ಅನಿಶ್ಚತತೆ ಈಗಲೂ ಮುಂದುವರಿದಿದೆ. ಉಭಯ ಸೇನೆಗಳು ಗಡಿ ಭಾಗದಲ್ಲಿ ತಮ್ಮ ಸಿಬ್ಬಂದಿಯ ನಿಯೋಜನೆ ಹೆಚ್ಚಿಸಿವೆ.
ಪರಿಸ್ಥಿತಿಯನ್ನು ತಿಳಿಗೊಳಿಸುವ ಸಲುವಾಗಿ ಉಭಯ ದೇಶಗಳ ಮಧ್ಯೆ ರಾಜತಾಂತ್ರಿಕ ಹಾಗೂ ಸೇನಾ ಮಟ್ಟದಲ್ಲಿ ಚರ್ಚೆಗಳು ಪ್ರಗತಿಯಲ್ಲಿವೆ.
ವಾಸ್ತವ ಗಡಿ ರೇಖೆಯುದ್ದಕ್ಕೂ ಉಭಯ ಸೇನೆಗಳು ಕ್ರಮವಾಗಿ 50 ಸಾವಿರ ಹಾಗೂ 60 ಸಾವಿರ ಸಿಬ್ಬಂದಿಯನ್ನು ನಿಯೋಜಿಸಿವೆ ಎಂದು ವರದಿ ತಿಳಿಸಿದೆ.