ದಾವಣಗೆರೆ, ಅ.17 (DaijiworldNews/HR): ಮುಂದಿನ ವರ್ಷ ರಾಜ್ಯದ 1,500 ಗ್ರಾಮಪಂಚಾಯತ್ಗಳಿಗೆ ಅಮೃತ್ ಗ್ರಾಮ ಯೋಜನೆ ವಿಸ್ತರಣೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಈ ವರ್ಷ ಅಮೃತ ಗ್ರಾಮ ಯೋಜನೆಯಡಿ 750 ಗ್ರಾ.ಪಂ. ಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದು, ಮುಂದಿನ ವರ್ಷ ರಾಜ್ಯದ 1500 ಗ್ರಾಮ ಪಂಚಾಯತ್ಗಳಿಗೆ ಅಮೃತ್ ಗ್ರಾಮ ಯೋಜನೆ ವಿಸ್ತರಿಸಲಾಗುವುದು" ಎಂದರು.
ಇನ್ನು ಸ್ವಾತಂತ್ರ್ಯ ಬಂದ 70 ವರ್ಷಗಳಲ್ಲಿ ಕೇವಲ 2 ಕೋಟಿ ಮನೆಗಳಿಗೆ ಮಾತ್ರ ನಲ್ಲಿ ನೀರು ಪೂರೈಕೆಯಾಗುತ್ತಿದ್ದು, ಇದೀಗ 5 ವರ್ಷಗಳಲ್ಲಿ 5 ಕೋಟಿ ಮನೆಗಳಿಗೆ ನಲ್ಲಿ ನೀರು ತಲುಪಿಸುವ ಕಾರ್ಯ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಮಾಡಿದೆ" ಎಂದು ಹೇಳಿದ್ದ್ದಾರೆ.